ಹದಿ ಹರೆಯ




ಹದಿಹರೆಯಕೆ ಕನಸುಂಟು

ಬಯಕೆಗಳು   ನೂರೆಂಟು

ಮನ ಮಿಡಿವ ಕಥೆಉಂಟು

ನೋವು ನಲಿವ ಗಂಟು ಉಂಟು


ಏನೋ ಬೇಕೇನುವ ಬಯಕೆ

ಆಸೆಗಳು ಕುಣಿವ  ಮನಕೆ

ಕನಸ್ಸುಗಳು ದೇವರಿಗೆ ಹರಕೆ

ಯಾರು ನೀಡಬೇಕು ಮದ್ದು ಈ ಜ್ವರಕೆ


ಮನದಿ ಮಿಡಿತದ ಪ್ರೀತಿ

ಒಲವು ಕನಸ್ಸಗೋ ರೀತಿ

ಮನುವು ಕುದುರೆಯಾಗಿ ಒಡಯ್ಯತಿ

ಹೃದಯ ಅರಳುವ ನೀತಿ


ಯಾರು ಬಲ್ಲರು ಈ ಕಾಯಿಲೆಯ

ಹದಿಹರೆಯದ ಪ್ರೀತಿ ಪ್ರಣಯ

ಜೋಡಿ ಹಕ್ಕಿಗಳ ಮನೆಯ

ಕುಣಿದು ನಲಿವ ಒಲವ ಸವಿಯ


ಮನಸ್ಸಿನ ಒಳಗೆ ತಳಮಳ

ಉಕ್ಕಿ ಹರಿಯುತಿಹಾ ಪ್ರಾಯ ಜಳ ಜಳ 

ಪ್ರೀತಿ ಹೊಳೆಯುತಿಹುದು ಪಳ ಪಳ 

ಕುದಿಯುತಿಹಾ ವಿರಹ ಮಳ ಮಳ


**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20