Posts

Showing posts from June, 2021

ಮಳೆ ಬಂತು ನೋಡ

Image
ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  ಮಿಚ್ಹೊಂದು ಮೂಡಿ  ಸಿಡಿಲೊಂದು ಬಡಿದು  ತೆಂಗಿನ ಸುಳಿಯನ್ನು ಸುಟ್ಟ್ಯತೆ  ಕುರಿ ಇಂಡು ಬಂದು ಬೆಚ್ಚಯತೆ  ಕುರಿಗಾಹಿ ಎದೆಯಲಿ ನಡುಕ  ಮರದಡಿಯ ಹನಿಯಿಂದ ಜಳಕ  ಮೈಲ್ಲೇಲ ನೆಂದು ಮರವೊಂದು ಬೆಂದು  ಕುರಿಗಾಹಿ ಮನವನ್ನು ಕೊಂದು  ನೀರೆಲ್ಲ ಕಾಲುವೆ  ತುಂಬಾ ಹರಿದ್ಯಾತೆ  ಕೆರೆ ತುಂಬಿ ಬಂದು  ಕೋಡಿಯ ಹೊರಚಾಚಿ ಸೋರಿಯತೇ  ಪೈರೆಲ್ಲ ಹಸಿರು  ಹೊಲವೆಲ್ಲ ಕೆಸರು  ರೈತನ ಮನದಲ್ಲಿ ಉಸಿರು   ಜೀವಂತವಾಗಿದೆ ಹೆಸರು  ದನಕರು ಮೈಯೆದು  ಹಾಲ್ಲನ್ನು ಕರೆದು  ಮನೆಗೆಲ್ಲ ಅಮೃತದ  ಹಾಲು ನೀಡಿಯಾತೀ           ಮಳೆ ಬಂತು ನೋಡ  ಬರವೋಯ್ತು ಹಾಡ  ನೆಮ್ಮದಿಯ ಬದುಕು  ಭರವಸೆಯ  ಬೆಳಕು  ಹಳ್ಳಿಯ ಜನರ  ಮನದಲ್ಲಿ ಮೂಡೈಯ್ತೀ  ಯುವಕರು ಕುಣಿದು  ಕುಪ್ಪಳಿಸಿ ಬೆಳೆದ್ಯ್ಯತಿ  ತಣ್ಣನೆ ಗಾಳಿ ಬಿಸ್ಯತೇ  ಮೋಡಗಳು ಚದುರಯತೇ  ಮುಸುಕಾದ ಮೋಡ  ಮಳೆ ಬಂತು ನೋಡ  **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಫಾದರ್ಸ್ ಡೇ

Image
ಫಾದರ್ಸ್ ಡೇ   ಅಪ್ಪ ಎಂದರೆ ನನಗೆ ಅಕ್ಕರೆ  ಪ್ರೀತಿಯ ಅಪ್ಪ ಜೀವನದ ಸಕ್ಕರೆ  ತನ್ನ ನೋವಲು ನಲಿವಿನ ಪಾಠ  ಸೋತರು ಕೂಡ ಗೆಲುವಿನ ಆಟ  ನನ್ನಯ ಮನದಿ ಮೊದಲ ಹೀರೋ  ನಾ ಕಂಡ ಬದುಕಿನ ಸ್ಟಾರ್  ತನ್ನಯ ಬುಜದಿ ಹೊತ್ತು ಸಾವರಿ  ತೋರಿದ ನನಗೆ ಜೀವನ ದಾರಿ  ಎಳು ಬಿಳಿನ ಪಯಣದಿ ಮುನ್ನೆಡಿಸಿ  ಸಾಗಿಸಿದ ನನ್ನ ಬದುಕನು ಸವಿಸಿ  ಅಪ್ಪ ಎಂಬ ಪದದಿ ಪ್ರೀತಿ ಉಂಟು  ಅವನೇ ನಮ್ಮ ಪರಿವಾರದ ನಂಟು  ನನ್ನಯ ಬದುಕಿಗೆ ಅವನೇ ಮುನ್ನುಡಿ  ಅವನು ತೋರಿದ ಪ್ರೀತಿಯೇ ಕಿರುನುಡಿ  ಸಾಗಿತು ಜೀವನ ಕಟ್ಟಿದ ಸೂರಡಿ  ಪೂಜಿಸುವೆವು ನಾವು ಪ್ರೀತಿಯ ತೆರಡಿ  ಅಪ್ಪ ಎಂದರೆ ನನ್ನಯ ಹೀರೋ  ಅವನೇ ನನ್ನ ಬದುಕಿನ ಸ್ಟಾರ್  ಪ್ರೀತಿಯ ನೆನಪಲಿ ಜಾತ್ರೆಯು ಜೋರು  ಹೊರಡೋಣ ನಾವು ಸೈಕಲ್ ಹೇರು  ಎಲ್ಲರಿಗೂ ಫಾದರ್  ಡೇ ಶುಭಾಶಯಗಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಬಣ್ಣದ ಹೂವು

Image
ಸಂಪಿಗೆ  ಅಸೆ ಎಂಬ ಬಣ್ಣದ ಹೂವು ಮಿಂಚುತ ಬಂತು  ದುರಾಸೆ ಎಂಬ ಮುಳ್ಳಿನ ಗಿಡವ ತಂತು  ಹೂವನು ಮೂಡಿದ ಹೆಣ್ಣಿನ ಸೆಳೆತ  ನನ್ನ ಮನಸ್ಸಲಿ ಒಳಪಿನ ಕೊರೆತ  ಸುಂದರ ಹೂವಿನ ನಗೆಯವಳು  ಸಂಪಿಗೆ ಮುಡಿದು ಬಂದವಳು  ಪ್ರೀತಿಯ ಊಟ ಇಟ್ಟವಳು  ನನ್ನ ಎದೆಯ ಬಡಿತವೇ ನನ್ನವಳು  ಕಾಣದ ಅಸೆ ಏಕೋ ದುರಾಸೆ  ವಂಚಿಸಿ ಬಂತು ನನ್ನೆಡೆಗೆ  ಪ್ರೀತಿಯ ಅಮಲು ನಗುವಿನ ಕಡಲು  ಬರಸೆಳೆದು ಬಂತು ನಂಕಡೆಗೆ  ಏಕೋ ಇಗೆ ಯೋಚಿಸುವಾಗಲೇ  ಪ್ರೀತಿಯು ಬಳಿ ಬಂತು  ನಾನೆ ಅವಳು ಸಂಪಿಗೆ ಮುಡಿದವಳು  ನಿನ್ನಾಸೆಯು ಎಳು ನನಗೆ  ಪ್ರೀತಿಯ ನೋವು ತಾಳದೆ ನಾನು  ಹೇಳಿದೆ ಅವಳಿಗೆ ಹೈ  ಲವ್ ಯು  ನನ್ನಯ ಕರೆಗೆ ಹೋಗಟ್ಟ ಸಂಪಿಗೆಯಿಂದ  ಉತ್ತರ ಬಂತು ನನಗೆ ಹೈ  ಹೇಟ್ ಯು  ನೋವುನು ನುಂಗಿದೆ ಹೂವನು ಬೇಡಿದೆ  ಪ್ರೀತಿ ಕೊಡುವೆಯ ನನಗಾಗಿ  ಹೂವು ಹೇಳಿತು ನಾ ಮೂಡಿದ ಸಂಪಿಗೆ  ನಿನ್ನಯ ಪ್ರಾಣವ ಕೇಳಿತು ವಿಷವಾಗಿ  ಸಂಪಿಗೆ ಒಲವ ಹರಿಯಲು  ಚೆಲುವ ಬಯಸಿದೆ ತನಗಾಗಿ  ವಿಷದ ಹಾವು ವಂಚಿಸಿ ಬಂತು ಪ್ರಾಣವ ತೆಗಿಯುತು  ಪ್ರೀತಿಯ ನೆನಪು ತಿಳಿಯುವುದೊರಳಗಾಗಿ  ಸ್ನೇಹದಿ ಕರೆದು ಸಂಪಿಗೆ ಮುಡಿದು  ಬಂದು ನನ್ನ ಕರೆದವಳೇ  ಪ್ರೀತಿಯ ಹುಚ್ಚು ಹಿಡಿಸಿ ನನಗೆ  ಮೊಸಾದಿ ನನ್ನ ಕೊಂದವಳೇ  ಅಸೆ ಎಂಬ ಕುದುರೆಯ ಹೇರಿ ದುರಾಸೆಯ  ಲಗಾಮಿಲ್ಲದೆ  ಕುದುರೆಯ ಬಿಟ್ಟವಳೇ  ********ರಚನೆ. ******* ಡಾ. ಚಂದ್ರಶೇಖರ. ಸಿ. ಹೆಚ್

ಓ ಯೇಸುವೇ

Image
  ಓ ಯೇಸುವೇ  ಓ ಯೇಸುವೇ ನನ್ನ ಮೊರೆಯನು ಕೆಳೆಯ  ಬಳಲಿದ ಜೀವಕೆ ಆಸರೆ ಹಾಗೆಯೇ  ನಿನ್ನ ಪಾದಕೆ ನಮಸ್ಕರಿಸಿದೆ  ನನ್ನನು ನೀನು ಅರಸೆಯ  ಕಷ್ಟಗಳ ಸರಮಾಲೆಯಲಿ ನೊಂದು ಬೇಡಿದೆ  ನನ್ನ ಕರೆಗೆ ನೀ ತೋರು ಕೃಪೆಯ ಜನದ ಜಂಗುಳಿಯಲಿ ನೋವು ಬಂದಿದೆ  ನನ್ನ ನೋವನು  ನೀನು ನುಂಗೆಯ  ಒಂಟಿ ಜೀವವು ಜೊತೆಯ ಬೇಡಿದೆ  ಪ್ರೀತಿಯಲಿ ನೀ ಕರುಣಿಸೆಯ  ಯಾಕೋ ಏನೋ ಹೀ ಮನಸು ಬಳಲಿದೆ  ಈ ಜೀವಕೆ ಶಕ್ತಿ ನೀಡೆಯ  ಅಸೆ ಹೋತ್ತು ನಾ ಪುಸ್ತಕ ಓದಿದೆ  ವಿದ್ಯಾವಂತನ ನೀ ಮಾಡೆಯ  ನೂರು ದಾರಿಯೇ ನನ್ನ ಮುಂದಿದೆ   ಸರಿ ದಾರಿಯ ನೀ ತೊರೆಯ  ಪಾಪವೆಲ್ಲವು ಪುಣ್ಯವಾಗಲು ನಿನ್ನ ಕೂಗಿ  ನಾ ಕರದೇ ಬಂದು ನಿಲ್ಲೆಯ  ಓ ಯೇಸುವೇ ನಿನ್ನ ಬೇಡಿದೆ  ನಿನ್ನ ಕಂದನ  ಮನ್ನಿಸೆಯ  *****ರಚನೆ ***-* ಡಾ. ಚಂದ್ರಶೇಖರ. ಸಿ. ಹೆಚ್

ಭಗವಂತ

Image
ಅಸೆ ಭಗವಂತ  ಬದುಕುವ  ಅಸೆ ಭಗವಂತ  ನೀ ಕೊಟ್ಟಿರೋ ಜೀವನ ನಂಗಂತ  ಬೇಡುವೆ ನಿನ್ನನ್ನು ಪ್ರೀತಿಯಲ್ಲಿ  ನಡೆಸು  ನನ್ನ ಸನ್ಮಾರ್ಗದಲ್ಲಿ  ಕತ್ತಲೆ ಸರಿದು ಬೆಳುಕು ಬಂದಿದೆ  ನಿನ್ನಯ ಕರುಣೆಯಲ್ಲಿ  ಮಾಡುವೆ  ನಿನ್ನಯ ಭಜನೆಯನ್ನು  ಕೊಡು ನೀನು ನನ್ನ ಮನಕೆ ಶಾಂತಿಯನು  ಸಾವಿರ ಭಕ್ತರ ಸಂಮುಖದಿ ನಡೆದಿದೆ ನಿನಗೆ ಅರ್ಚನೆಯು  ಭಕ್ತತರ ನೋವು ನಿಗಿದೆ ನೀನು  ಪ್ರೀತಿಯ ಬದುಕು ಕರುಣಿಸಿದೆ ಯೇನು  ನೀನ್ನಯ ಒಲವಲಿ ಮಿಂದೇನು ನಾ  ಹೆಸರನು ಪಠಿಸಿ ಬೇಡಿದೆ ನಾ  ಯಾಕೋ ಇಂದು ಉಲ್ಲಾಸ್  ನಿನ್ನ ಹೆಸರಲ್ಲಿಯೇ ಇದೇ ಆತ್ಮವಿಶ್ವಾಸ  ಸಾವಿರ ನೋವಿಗೆ ಮದ್ದು ನೀ  ಸುಂದರವಾದ  ವಿದ್ಯೆಯು ನೀ ರುಚಿಸಿದೆ ರೊಟ್ಟಿ ನಿನ್ನಿಂದ  ಸವಿದೆ ನಾನು ಸೊಬಗಿನಿಂದ   ಬದುಕುವ ಅಸೆ ಭಗವಂತ  ನೀ ಕೊಟ್ಟಿರೋ ಭಿಕ್ಷೆ ಜೀವಂತ ನಿನ್ನಯ ಪಾದಕೆ ನಮಿಸಿದೆ ನಾ  ಕೋಟಿ ನಮನ ತಿಳಿಸಿದೆ ನಾ  **********ರಚನೆ ******* ಡಾ ಚಂದ್ರಶೇಖರ. ಸಿ. ಹೆಚ್

ಇದ್ದಾಗ ಸಾದಿಸು

Image
ಇದ್ದಾಗ ಸಾದಿಸು  ಸತ್ತಾಗ ಸುಟ್ಟರೆ ಬೂದಿಯಾಗುವೆ  ಊತಗ ಮಣ್ಣಲಿ ಮಣ್ಣಾಗುವೆ ಇದ್ದಾಗ ಏನಾದರೂ ಸಾದಿಸು  ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು  ನೀನುಟ್ಟ ಬಟ್ಟೆ ನಿನಿಂದೆ ಬರಲಿಲ್ಲ  ನೀನಿಟ್ಟ ಗಂಟು ನೀ ಕೋಂಡಯೋಲಿಲ್ಲ  ನೀ ಮಾಡಿದ ಹೆಸರು ನಿನ್ನ ಕಥೆ ಹೇಳಿದೆಯೆಲ್ಲ  ನಿನ್ನ ಉಸಿರು ಯಾಕೋ ಇಂದು ಗಾಳಿಯಾಗಿದೆಯೆಲ್ಲ  ವಿಧಿ ಆಟ ಯಾರು ಬಲ್ಲವರಿಲ್ಲ  ಅವನಾಟದಂತೆ ಜೀವನ ನಡೆವುದೆಲ್ಲ  ಇದ್ದಾಗ ಬಾಳು ನೂರ ಜನ ಮೆಂಚುವಂತೆ  ಚಿಂತೆ ಬೇಡ ನಿನಗೆ ನೋಡಿ ನಗುವರೆಲ್ಲ  ಪ್ರೀತಿಸು ನಿನ್ನವರ ಬದುಕಿನ ಕೊನೆಯತನಕ  ಮರೆಯಾಗದಿರಲಿ ನಿನ್ನ ಹೆಸರು ಮರೆಯೋತನಕ  ಸಾದಿಸು ನೀನು ಕೊನೆ ಉಸಿರಿರುವತನಕ  ತೀರಿಸು ನೀನು ಈ ಮಣ್ಣ ಋಣ ಮುಗಿಯುವತನಕ  ನೋವ ಕೊಟ್ಟರು ನುಂಗಲಿ ದೇವರು  ಕಾಲು ಎಳೆಯೋರಿಗೆ ಕಾಲವೇ ಉತ್ತರಿಸಲಿ  ಪ್ರೀತಿ ಕೊಟ್ಟರು ಉಳಿಯಲಿ ಹೃದಯದಿ  ಪ್ರಾಣ ಹೋದಾಗ ತೆರೆಯಲಿ ಸ್ವರ್ಗ  ಮರೆತು ನೀನು ಹೋಗುವೆ ಈ ನರಕ ಸತ್ತಾಗ ಸುಟ್ಟರೆ ಬೂದಿಯಾಗುವೆ  ಊತಗ ಮಣ್ಣಲಿ ಮಣ್ಣಾಗುವೆ ಇದ್ದಾಗ ಏನಾದರೂ ಸಾದಿಸು  ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು  ********ರಚನೆ. ******** ಡಾ. ಚಂದ್ರಶೇಖರ. ಸಿ. ಹೆಚ್

ಓ ದೇವನೇ ಶರಣಾದೆ

Image
ಜೀವನಕೆ ಜೀವವವೇ ನೀನಾದೆ  ಹೃದಯದ ಬಡಿತವೇ ಯಾಕಾದೆ  ನೋವಿಗೆ ನಲಿವಿನ ಸಂಜಿವಿನಿಯಾದೇ  ಮಣ್ಣಿಗೆ ತಂಪೆರದ ಮಳೆಯಾದೆ ಕಷ್ಟದಿ ಸುರಿದ ಬೆವರ ಹನಿಯಾದೆ  ಚಿಂತೆಯಲಿ ಬೆಂದ ಮನವು ಯಾಕಾದೆ  ಬೆಂಕಿಯಲ್ಲಿ ಸುಟ್ಟು  ಬೂದಿ ಯಾದೆ  ತಂಬೂರಿಯಲಿ ಮೀಟಿದ ನಾದವದೆ  ಹಸು ಸುರಿಸಿದ ಅಮೃತದ ಹಾಲದೆ  ಆಕಾಶದಿ ನಕ್ಷತ್ರಗಳ ಹೊತ್ತ ನೀಲಿ ಭಾನಾದೆ  ಸೂರ್ಯನ ಕೆಂಪಾಗಿಸಿದ ಲಾವಾ ರಸವಾದೇ  ರಾತ್ರಿಯ ಬೆಳಗಿಸಿದ ಚಂದ್ರನಾದೇ  ಮೂರು ಕಣ್ಣು ಹೊತ್ತ ಏಳ ನೀರು ನಿನಾದೆ  ಹರಿಯುವ ನದಿಗೆ ಜುಳು ಜುಳು ಶಬ್ಧವಾದೇ  ಗಿಡವಾಗಿ ಮರವಾಗಿ ಹೂವು ಬಿಟ್ಟು ಹಣ್ಣಾದೆ  ಭೋರ್ಗರೆವ ಸಮುದ್ರದ ಅಲೆಯಾದೆ  ಓ  ದೇವನೇ ಪ್ರಕೃತಿಯ ಸೃಷ್ಟಿಯು ನಿನ್ನಿಂದ  ಅ ನಿನ್ನ ಸೃಷ್ಟಿಯ ರಚನೆಗೆ  ಸೋತು ಶರಣಾದೆ *********ರಚನೆ, ********* ಡಾ. ಚಂದ್ರಶೇಖರ. ಸಿ. ಹೆಚ್

ಕಣ್ಣ ನೋಟ

Image
ಹುಡುಗಿ ನಿನ್ನ ಕಣ್ಣ ನೋಟ  ಬಂದು ನನ್ನ ತಾಗಿತ್ತಲ್ಲ  ನನ್ನ ಮನಸ್ಸು ಇಂದು   ಯಾಕೋ ನಿನ್ನ ಕೂಗಿತಲ್ಲ  ಕೇಳದೆಯೇ ಹೊರಟು ಹೋದೆ  ಅಂದು ನೀನು ಸಂಜೆ  ಕಾಯುತಿಹೆನು ನಿನ್ನ ದಾರಿ  ಹುಟ್ಟು ಬಂದು ಪಂಜೆ  ಏತಕ್ಕೆ ಏನೋ ಹಾಗಿದೆ  ನನಗೆ ನಿನ್ನ ಮೇಲೆ ಪ್ರೀತಿ  ಒಮ್ಮೆ ನಕ್ಕು  ನೀನು ಎಳೆಯ  ನನಗು ಸ್ವಲ್ಪ ಪ್ರೇಮ ಐತಿ  ನಿನ್ನ ಕಂಡ ನನಗೆ ಆಕಾಶದಿ.  ನಕ್ಷತ್ರ ಮೂಡಿದಾಗೆ  ನಿನು ಇಲ್ಲದ ಗಳಿಗೆ  ಬಾನಿನಿಂದ ಉಲ್ಕೆ ಬಿದ್ದ ಹಾಗೇ  ಆಗೆಯೇನು ನೀನು ನನ್ನ  ಚೆಂದದ ಬಾಳ ಸಂಗಾತಿ   ಹೃದಯ ಏಕೋ ಏಳುತಿದೆ  ನೀನೇ ನನ್ನ ಮುದ್ದು ಹೆಂಡತಿ  ಕಣ್ಣಿನಲ್ಲಿ ಕಣ್ಣ ಇಟ್ಟು  ನೋಡಿಯೇನು ನನ್ನ  ಮನುಸು ಏಕೋ ಬೇಡುತಿದೆ  ನಿನ್ನ ಪ್ರೀತಿಯನ್ನ  ಎಷ್ಟು ಕಾಡಿದರು ಬೇಡಿದರು  ನೀನು ಕೇಳಲಿಲ್ಲ  ಸೂರ್ಯನಂತೆ ಕೆಂಪಾಗಿ  ನನ್ನ ಮನಸ್ಸು ಸುಟ್ಟೆಯಲ್ಲ  ನಿನ್ನ ಕಣ್ಣ ನೋಟ ಮೋಸವೆಂದು  ನನಗೆ ತಿಳಿಯಲಿಲ್ಲ  ನಾನು  ಕಂಡ ಪ್ರೀತಿ ಕನಸು  ಗಾಜಿನಂತೆ ಚೂರಾಯಿತಲ್ಲ  ಬದುಕಿನಲ್ಲಿ ಕಾಡಿವೋದೇ  ಪ್ರೀತಿಯನು ಕೊಂದುವೊದೆ  ನೋಟದಿ ಚುಚ್ಚಿವೋದೇ ನೀನು  ಬಾಳಲಿ ನೊಂದುವೊದೆ ನಿನ್ನ ಪ್ರೀತಿಗಾಗಿ ನಾನು  ಸಮಯ ಕಳೆದ ಮೇಲೇ  ನಿನ್ನ ನೆನಪು ಮೂಡಿ ಬಂತು  ನೀನು ಹುಟ್ಟ ಹಸಿರು ಚೂಡಿ  ನನ್ನ ಮನದಲ್ಲಿ ಇತ್ತು  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕೈಡಿದ ನಲ್ಲೆ

Image
ಕೈ ಇಡಿದ ನಲ್ಲೆ  ಕೈ ಇಡಿದ ನಲ್ಲೆ              ಕೈ ಕೊಟ್ಟೆಯಲ್ಲೇ  ಬಾಳುವ ಮುನ್ನ               ಕಾಲ್ಕಿತ್ತೆಯಲ್ಲೇ  ಪ್ರೀತಿಯ ಹೆಸರು                 ಮೋಸವೇ ಉಸಿರು  ನೆನಪೊಂದು ಹಸಿರು                  ಜೀವನವೇ ಕೆಸರು  ಕೆಸರೊಂದು ಕೆಂಪಾಗಿ                  ಮನಸೊಂದು ನಿನ ಕೂಗಿ  ಒಲವೊಂದು ನನ್ನೇ ತಾಗಿ                   ಕೂಗಿದಂತೆ ಬಳಿ ಬಾಗಿ  ಕೈ ಇಡಿದ ನಲ್ಲೆ                ಕೈ ಕೊಟ್ಟೆಯಲ್ಲೇ  ಬಾಳುವ ಮುನ್ನ                 ಕಾಲ್ಕಿತ್ತೆಯಲ್ಲೇ  ಪ್ರೀತಿ ಎಂಬ ಮಾಯೆ                 ಬರಿ ನೋವಿನ ಛಾಯೆ  ಏತಕೀ ಹಸಿ ಕನಸು                  ನನ್ನಲಿ ಹುಸಿ ಮುನಿಸು  ಪ್ರಾಣವ ಹೋಗಿದೆ                 ನಿನ್ನಾಣೆ ಕೂಗಿದೆ  ಮೋಸವೇ ಹಾಗಿದೆ                   ಈಗೇಕೆ ಕಾಡಿದೆ    ದೇವರ ಕೇಳಿದೆ              ವರವನು ಬೇಡಿದೆ  ನಿನ ನೆನಪು ಬೇಡ                ನೀನು ಗಾಳಿಯೇ ಇಲ್ಲದ ಸೋಡಾ  ಕೈ ಇಡಿದ ನಲ್ಲೆ                ಕೈ ಕೊಟ್ಟೆಯಲ್ಲೇ  ಬಾಳುವ ಮುನ್ನ                 ಕಾಲ್ಕಿತ್ತೆಯಲ್ಲೇ **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

🍎🍏🍒ಸೇಬೊಂದು ಫ್ರೆಶ್ 🍒🍎🍏

Image
ಸೇಬೊಂದು ಫ್ರೆಶ್  ನನಗೀಗ ಕ್ರಶ್  ಪ್ರೀತಿ ಎಂಬ ಪದವು  ಹೆಜ್ಜೆ ಗುರುತು ಸಿಗದ ಫಿಶ್  ನೋಟವು ನಾಟಿದೆ  ನನ್ನನೆ ಕಾಡಿದೆ  ಪ್ರೀತಿಯ ಬೇಡಿದೆ  ನಿನ ಹೆಸರನು ಕೂಗಿದೆ  ಕಣ್ಣಸನ್ನೆ ಬಲು ಅರಿತ  ಮನಸ್ಸಲ್ಲಿ ನಿನ ಕೊರೆತ  ಹಸಿವೆಂಬ ಪ್ರೀತಿ ಇರಿತ  ಏರಿದೆ ಹೃದಯ ಬಡಿತ  ಸೇಬೊಂದು ಫ್ರೆಶ್  ನನಗೀಗ ಕ್ರಶ್  ಪ್ರೀತಿ ಎಂಬ ಪದವು  ಹೆಜ್ಜೆ ಗುರುತು ಸಿಗದ ಫಿಶ್  ನಗುವೊಂದು ಗುಲಾಬಿ  ಮಾತೆಲ್ಲ ಮುತ್ತಾಗಿ  ಸುರಿಯ ಬಾರಾದೆ ಜೇನಾಗಿ  ನಿನ್ನ ಪ್ರೀತಿಯು ನನಗಾಗಿ  ನವಿಲಿನ ನಾಟ್ಯದಂತೆ ನಡಿಗೆ  ಕೆನ್ನೆಗೆ ನಿನ ಇಟ್ಟ ಖಾಡಿಗೆ  ತುಟಿಯೊಂದು ತೊಂಡೆ  ನಿನು  ಹಸಿರಾದ ಬೆಂಡೆ  ವರ್ಣಿಸಲು ನಿನ್ನ ಅಂದ  ಸಾಲದು ಪದ ಬಂದ  ನೀನೀಗ ಮಿಸ್  ಬೇಗ ಪ್ರೀತಿಯನು  ಎಳು ಎಸ್  ಸೇಬೊಂದು ಫ್ರೆಶ್  ನನಗೀಗ ಕ್ರಶ್  ಪ್ರೀತಿ ಎಂಬ ಪದವು  ಹೆಜ್ಜೆ ಗುರುತು ಸಿಗದ ಫಿಶ್  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

🌴🌴🌴ಬರಸಿಡಿಲು ಬಡಿದು🌴🌴🌴

Image
  ಕಾಣದ ಕಪ್ಪು ದಾರಿಗೆ  ಬರಸಿಡಿಲು ಬಡಿದು  ನೋವೆಂಬ ಮರಕೆ  ಬೆಂಕಿಯ ಸಿಡಿದು  ತುಸುದೂರ ನಿಂತಾಗ  ಕಾರ್ಮೋಡ ಕವಿದು  ಮಳೆಬಂದು ನೀರೆಲ್ಲ  ಭೂಮಿಗೆ ಸುರಿದು  ಹಸಿರಯ್ತು ನೆಲವು  ಕೆರೆತುಂಬಿದ ಜಲವು  ಬೆಳೆಬಂದು ನಿಂತು  ತೆನೆಬಂದು ಕುಂತು  ಸುಗ್ಗಿಯ ಕಾದ್ಯತೇ  ಸಂಕ್ರಾಂತಿ ಬೇಡಯತಿ  ಕೊನೆ ತುಂಬಿದ ಪಸಲು  ತಾಕಲು ರೈತನ ವಸಲು  ಮನೆತುಂಬಿದ ಬೆಳೆ  ಮನದಲ್ಲಿ ಹೊಸ ಕಳೆ ಸಂತೋಷವ ತಂತು  ನವವರುಷವು ಬಂತು  ಸಡಗರದೀ ಬಾಳು  ಸುರಡಿಯ ನೆರಳು  ತಂಪುನು ನೀಡಿ  ಮನ ಕಲಕಿ ತುಡಿದ್ಯತಿ ಹಾಲಕ್ಕಿ ಹೇಳು  ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

🌀🌀🌀ಜೀವನದ ಗಂಟು🌀🌀🌀

Image
ನೂರೆಂಟು ಚಿಂತೆಯಲ್ಲಿ  ಜೀವನದ ಗಂಟು  ಬದುಕಿನ ಕೊನೆಯಲ್ಲಿ  ಮಸಣದ ನಂಟು    ನಾವೆಂಬ ಪದದಲಿ  ಪ್ರೀತಿಯು ಉಂಟು ನಾನೆಂಬ ಭ್ರಮೆಯಲ್ಲಿ ಪಯಣವೇ ಕಗ್ಗಂಟು  ಬಾಳೆಂಬ ಪಥದಲ್ಲಿ  ಏತಕೆ ಮೋಹ  ಬದುಕಿನ ನಡೆಯಲ್ಲಿ  ತೀರದ ದಾಹ  ಬಿಸಿಯಾದ ಅಸೆ  ಕನಸಿನ ಕುದುರೆಯ  ಏರುವ ಮನಸ್ಸೇ  ದಿನಗಳ ಸವೆತದಲಿ  ಬದುಕಿನ ನಡಿಗಯಲಿ  ಕಳೆದೋದ ವಯಸ್ಸೇ  ಜೀವನವು ಸುಂದರ  ಅರಿತರೆ ಕಂದರ  ನಕ್ಕು ನೀ ನಲಿಯಲು  ದಾರಿಯೇ ಸಡಗರ  ಪ್ರೀತಿಯ ಕೊರೆತ  ಹೃದಯದ ಬಡಿತ  ಮನಸಿನ ತುಡಿತ  ಅರಿತು ನೀ ನಡೆದರೆ  ಸಂತೋಷವು ಉಚಿತ  ಎರೆಡು ಕಾಲು ಸವೆಸೀ  ಮೂರಕಾಸು ಉಳಿಸಿ  ಕಷ್ಟಗಳ ಸಹಿಸಿ  ಪ್ರೀತಿಯ ಜಯಿಸು  ಸಾವಿನ ಸಂತೆಯಲ್ಲಿ  ನಡೆವುದೇ ನಿಗಂಟು  ದೇವರ ಕೃಪೆಯಲ್ಲಿ  ಸ್ವರ್ಗವೇ ಉಂಟು  ನೂರೆಂಟು ಚಿಂತೆಯಲ್ಲಿ  ಜೀವನದ ಗಂಟು  ಬದುಕಿನ ಕೊನೆಯಲ್ಲಿ  ಮಸಣದ ನಂಟು            ******ರಚನೆ **** ********ಡಾ. ಚಂದ್ರಶೇಖರ. ಸಿ. ಹೆಚ್ ********

🐲🌴ನಿನ್ನದೇ ತುಡಿತ🌴🐲

Image
ಮನಸಿನ ಅಲೆಯಲ್ಲಿ  ಮೌನದ ಮೊರೆತ  ಪ್ರೀತಿಯ ಬಯಕೆಗೆ  ನಿನ್ನದೇ ತುಡಿತ  ಕಾಣುವ ಕನಸಿಗೆ  ಹಾರುವ ಬಯಕೆ  ತೀರದ ಒಲವಿಗೆ  ನೋವೊಂದು ಮನಕೆ  ಸುಂದರ ಸಂಜೆಯಲ್ಲಿ  ಮುಳುಗಿದ ಸೂರ್ಯ  ನಿನ್ನನು ಕಂಡಾಗ  ತಂಪಾದ ಚಂದ್ರ  ಹೃದಯದ ಗಾಯಕೆ  ನೀನಾದೆ  ಮುಲಾಮು   ನಿನ್ನಯ ಪ್ರೇಮಕೆ  ನನ್ನದೊಂದು ಸಾಲಮು  ಹಾಡಿನ ಸ್ವರಕೆ  ನಾದವೇ ನೀನಾದೆ  ಸೋತದ ಮನಕೆ  ಸ್ವರ್ಗವ ನೀತಂದೆ  ಮನಸಿನ ಅಲೆಯಲ್ಲಿ  ಮೌನದ ಮೊರೆತ  ಪ್ರೀತಿಯ ಬಯಕೆಗೆ  ನಿನ್ನದೇ ತುಡಿತ  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್