ಫಾದರ್ಸ್ ಡೇ

ಫಾದರ್ಸ್ ಡೇ  


ಅಪ್ಪ ಎಂದರೆ ನನಗೆ ಅಕ್ಕರೆ 

ಪ್ರೀತಿಯ ಅಪ್ಪ ಜೀವನದ ಸಕ್ಕರೆ 

ತನ್ನ ನೋವಲು ನಲಿವಿನ ಪಾಠ 

ಸೋತರು ಕೂಡ ಗೆಲುವಿನ ಆಟ 


ನನ್ನಯ ಮನದಿ ಮೊದಲ ಹೀರೋ 

ನಾ ಕಂಡ ಬದುಕಿನ ಸ್ಟಾರ್ 

ತನ್ನಯ ಬುಜದಿ ಹೊತ್ತು ಸಾವರಿ 

ತೋರಿದ ನನಗೆ ಜೀವನ ದಾರಿ 


ಎಳು ಬಿಳಿನ ಪಯಣದಿ ಮುನ್ನೆಡಿಸಿ 

ಸಾಗಿಸಿದ ನನ್ನ ಬದುಕನು ಸವಿಸಿ 

ಅಪ್ಪ ಎಂಬ ಪದದಿ ಪ್ರೀತಿ ಉಂಟು 

ಅವನೇ ನಮ್ಮ ಪರಿವಾರದ ನಂಟು 


ನನ್ನಯ ಬದುಕಿಗೆ ಅವನೇ ಮುನ್ನುಡಿ 

ಅವನು ತೋರಿದ ಪ್ರೀತಿಯೇ ಕಿರುನುಡಿ 

ಸಾಗಿತು ಜೀವನ ಕಟ್ಟಿದ ಸೂರಡಿ 

ಪೂಜಿಸುವೆವು ನಾವು ಪ್ರೀತಿಯ ತೆರಡಿ 


ಅಪ್ಪ ಎಂದರೆ ನನ್ನಯ ಹೀರೋ 

ಅವನೇ ನನ್ನ ಬದುಕಿನ ಸ್ಟಾರ್ 

ಪ್ರೀತಿಯ ನೆನಪಲಿ ಜಾತ್ರೆಯು ಜೋರು 

ಹೊರಡೋಣ ನಾವು ಸೈಕಲ್ ಹೇರು 


ಎಲ್ಲರಿಗೂ ಫಾದರ್  ಡೇ ಶುಭಾಶಯಗಳು 


*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35