ಭಗವಂತ
ಅಸೆ ಭಗವಂತ |
ಬದುಕುವ ಅಸೆ ಭಗವಂತ
ನೀ ಕೊಟ್ಟಿರೋ ಜೀವನ ನಂಗಂತ
ಬೇಡುವೆ ನಿನ್ನನ್ನು ಪ್ರೀತಿಯಲ್ಲಿ
ನಡೆಸು ನನ್ನ ಸನ್ಮಾರ್ಗದಲ್ಲಿ
ಕತ್ತಲೆ ಸರಿದು ಬೆಳುಕು ಬಂದಿದೆ
ನಿನ್ನಯ ಕರುಣೆಯಲ್ಲಿ
ಮಾಡುವೆ ನಿನ್ನಯ ಭಜನೆಯನ್ನು
ಕೊಡು ನೀನು ನನ್ನ ಮನಕೆ ಶಾಂತಿಯನು
ಸಾವಿರ ಭಕ್ತರ ಸಂಮುಖದಿ ನಡೆದಿದೆ ನಿನಗೆ ಅರ್ಚನೆಯು
ಭಕ್ತತರ ನೋವು ನಿಗಿದೆ ನೀನು
ಪ್ರೀತಿಯ ಬದುಕು ಕರುಣಿಸಿದೆ ಯೇನು
ನೀನ್ನಯ ಒಲವಲಿ ಮಿಂದೇನು ನಾ
ಹೆಸರನು ಪಠಿಸಿ ಬೇಡಿದೆ ನಾ
ಯಾಕೋ ಇಂದು ಉಲ್ಲಾಸ್
ನಿನ್ನ ಹೆಸರಲ್ಲಿಯೇ ಇದೇ ಆತ್ಮವಿಶ್ವಾಸ
ಸಾವಿರ ನೋವಿಗೆ ಮದ್ದು ನೀ
ಸುಂದರವಾದ ವಿದ್ಯೆಯು ನೀ
ರುಚಿಸಿದೆ ರೊಟ್ಟಿ ನಿನ್ನಿಂದ
ಸವಿದೆ ನಾನು ಸೊಬಗಿನಿಂದ
ಬದುಕುವ ಅಸೆ ಭಗವಂತ
ನೀ ಕೊಟ್ಟಿರೋ ಭಿಕ್ಷೆ ಜೀವಂತ
ನಿನ್ನಯ ಪಾದಕೆ ನಮಿಸಿದೆ ನಾ
ಕೋಟಿ ನಮನ ತಿಳಿಸಿದೆ ನಾ
**********ರಚನೆ *******
ಡಾ ಚಂದ್ರಶೇಖರ. ಸಿ. ಹೆಚ್
Comments
Post a Comment