ಮಳೆ ಬಂತು ನೋಡ


ತಣ್ಣನೆ ಗಾಳಿ ಬಿಸ್ಯತೇ 

ಮೋಡಗಳು ಚದುರಯತೇ 

ಮುಸುಕಾದ ಮೋಡ 

ಮಳೆ ಬಂತು ನೋಡ 


ಮಿಚ್ಹೊಂದು ಮೂಡಿ 

ಸಿಡಿಲೊಂದು ಬಡಿದು 

ತೆಂಗಿನ ಸುಳಿಯನ್ನು ಸುಟ್ಟ್ಯತೆ 

ಕುರಿ ಇಂಡು ಬಂದು ಬೆಚ್ಚಯತೆ 


ಕುರಿಗಾಹಿ ಎದೆಯಲಿ ನಡುಕ 

ಮರದಡಿಯ ಹನಿಯಿಂದ ಜಳಕ 

ಮೈಲ್ಲೇಲ ನೆಂದು ಮರವೊಂದು ಬೆಂದು 

ಕುರಿಗಾಹಿ ಮನವನ್ನು ಕೊಂದು 


ನೀರೆಲ್ಲ ಕಾಲುವೆ 

ತುಂಬಾ ಹರಿದ್ಯಾತೆ 

ಕೆರೆ ತುಂಬಿ ಬಂದು 

ಕೋಡಿಯ ಹೊರಚಾಚಿ ಸೋರಿಯತೇ 


ಪೈರೆಲ್ಲ ಹಸಿರು 

ಹೊಲವೆಲ್ಲ ಕೆಸರು 

ರೈತನ ಮನದಲ್ಲಿ ಉಸಿರು 

 ಜೀವಂತವಾಗಿದೆ ಹೆಸರು 


ದನಕರು ಮೈಯೆದು 

ಹಾಲ್ಲನ್ನು ಕರೆದು 

ಮನೆಗೆಲ್ಲ ಅಮೃತದ 

ಹಾಲು ನೀಡಿಯಾತೀ 

        

ಮಳೆ ಬಂತು ನೋಡ 

ಬರವೋಯ್ತು ಹಾಡ 

ನೆಮ್ಮದಿಯ ಬದುಕು 

ಭರವಸೆಯ  ಬೆಳಕು 


ಹಳ್ಳಿಯ ಜನರ 

ಮನದಲ್ಲಿ ಮೂಡೈಯ್ತೀ 

ಯುವಕರು ಕುಣಿದು 

ಕುಪ್ಪಳಿಸಿ ಬೆಳೆದ್ಯ್ಯತಿ 



ತಣ್ಣನೆ ಗಾಳಿ ಬಿಸ್ಯತೇ 

ಮೋಡಗಳು ಚದುರಯತೇ 

ಮುಸುಕಾದ ಮೋಡ 

ಮಳೆ ಬಂತು ನೋಡ 


**********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ