🐲🌴ನಿನ್ನದೇ ತುಡಿತ🌴🐲
ಮನಸಿನ ಅಲೆಯಲ್ಲಿ
ಮೌನದ ಮೊರೆತ
ಪ್ರೀತಿಯ ಬಯಕೆಗೆ
ನಿನ್ನದೇ ತುಡಿತ
ಕಾಣುವ ಕನಸಿಗೆ
ಹಾರುವ ಬಯಕೆ
ತೀರದ ಒಲವಿಗೆ
ನೋವೊಂದು ಮನಕೆ
ಸುಂದರ ಸಂಜೆಯಲ್ಲಿ
ಮುಳುಗಿದ ಸೂರ್ಯ
ನಿನ್ನನು ಕಂಡಾಗ
ತಂಪಾದ ಚಂದ್ರ
ಹೃದಯದ ಗಾಯಕೆ
ನೀನಾದೆ ಮುಲಾಮು
ನಿನ್ನಯ ಪ್ರೇಮಕೆ
ನನ್ನದೊಂದು ಸಾಲಮು
ಹಾಡಿನ ಸ್ವರಕೆ
ನಾದವೇ ನೀನಾದೆ
ಸೋತದ ಮನಕೆ
ಸ್ವರ್ಗವ ನೀತಂದೆ
ಮನಸಿನ ಅಲೆಯಲ್ಲಿ
ಮೌನದ ಮೊರೆತ
ಪ್ರೀತಿಯ ಬಯಕೆಗೆ
ನಿನ್ನದೇ ತುಡಿತ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Nice Sir 👏
ReplyDelete