🌀🌀🌀ಜೀವನದ ಗಂಟು🌀🌀🌀



ನೂರೆಂಟು ಚಿಂತೆಯಲ್ಲಿ 

ಜೀವನದ ಗಂಟು 

ಬದುಕಿನ ಕೊನೆಯಲ್ಲಿ 

ಮಸಣದ ನಂಟು 

 

ನಾವೆಂಬ ಪದದಲಿ 

ಪ್ರೀತಿಯು ಉಂಟು

ನಾನೆಂಬ ಭ್ರಮೆಯಲ್ಲಿ

ಪಯಣವೇ ಕಗ್ಗಂಟು 



ಬಾಳೆಂಬ ಪಥದಲ್ಲಿ 

ಏತಕೆ ಮೋಹ 

ಬದುಕಿನ ನಡೆಯಲ್ಲಿ 

ತೀರದ ದಾಹ 


ಬಿಸಿಯಾದ ಅಸೆ 

ಕನಸಿನ ಕುದುರೆಯ 

ಏರುವ ಮನಸ್ಸೇ 


ದಿನಗಳ ಸವೆತದಲಿ 

ಬದುಕಿನ ನಡಿಗಯಲಿ 

ಕಳೆದೋದ ವಯಸ್ಸೇ 


ಜೀವನವು ಸುಂದರ 

ಅರಿತರೆ ಕಂದರ 

ನಕ್ಕು ನೀ ನಲಿಯಲು 

ದಾರಿಯೇ ಸಡಗರ 


ಪ್ರೀತಿಯ ಕೊರೆತ 

ಹೃದಯದ ಬಡಿತ 

ಮನಸಿನ ತುಡಿತ 

ಅರಿತು ನೀ ನಡೆದರೆ 

ಸಂತೋಷವು ಉಚಿತ 


ಎರೆಡು ಕಾಲು ಸವೆಸೀ 

ಮೂರಕಾಸು ಉಳಿಸಿ 

ಕಷ್ಟಗಳ ಸಹಿಸಿ 

ಪ್ರೀತಿಯ ಜಯಿಸು 



ಸಾವಿನ ಸಂತೆಯಲ್ಲಿ 

ನಡೆವುದೇ ನಿಗಂಟು 

ದೇವರ ಕೃಪೆಯಲ್ಲಿ 

ಸ್ವರ್ಗವೇ ಉಂಟು 


ನೂರೆಂಟು ಚಿಂತೆಯಲ್ಲಿ 

ಜೀವನದ ಗಂಟು 

ಬದುಕಿನ ಕೊನೆಯಲ್ಲಿ 

ಮಸಣದ ನಂಟು 


          ******ರಚನೆ ****


********ಡಾ. ಚಂದ್ರಶೇಖರ. ಸಿ. ಹೆಚ್ ********

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35