ಕೈಡಿದ ನಲ್ಲೆ

ಕೈ ಇಡಿದ ನಲ್ಲೆ 


ಕೈ ಇಡಿದ ನಲ್ಲೆ 

            ಕೈ ಕೊಟ್ಟೆಯಲ್ಲೇ 

ಬಾಳುವ ಮುನ್ನ 

             ಕಾಲ್ಕಿತ್ತೆಯಲ್ಲೇ 


ಪ್ರೀತಿಯ ಹೆಸರು 

               ಮೋಸವೇ ಉಸಿರು 

ನೆನಪೊಂದು ಹಸಿರು 

                ಜೀವನವೇ ಕೆಸರು 


ಕೆಸರೊಂದು ಕೆಂಪಾಗಿ 

                ಮನಸೊಂದು ನಿನ ಕೂಗಿ 

ಒಲವೊಂದು ನನ್ನೇ ತಾಗಿ 

                 ಕೂಗಿದಂತೆ ಬಳಿ ಬಾಗಿ 


ಕೈ ಇಡಿದ ನಲ್ಲೆ 

              ಕೈ ಕೊಟ್ಟೆಯಲ್ಲೇ 

ಬಾಳುವ ಮುನ್ನ 

               ಕಾಲ್ಕಿತ್ತೆಯಲ್ಲೇ 


ಪ್ರೀತಿ ಎಂಬ ಮಾಯೆ 

               ಬರಿ ನೋವಿನ ಛಾಯೆ 

ಏತಕೀ ಹಸಿ ಕನಸು 

                ನನ್ನಲಿ ಹುಸಿ ಮುನಿಸು 


ಪ್ರಾಣವ ಹೋಗಿದೆ 

               ನಿನ್ನಾಣೆ ಕೂಗಿದೆ 

ಮೋಸವೇ ಹಾಗಿದೆ 

                 ಈಗೇಕೆ ಕಾಡಿದೆ 

 

ದೇವರ ಕೇಳಿದೆ 

            ವರವನು ಬೇಡಿದೆ 

ನಿನ ನೆನಪು ಬೇಡ 

              ನೀನು ಗಾಳಿಯೇ ಇಲ್ಲದ ಸೋಡಾ 


ಕೈ ಇಡಿದ ನಲ್ಲೆ 

              ಕೈ ಕೊಟ್ಟೆಯಲ್ಲೇ 

ಬಾಳುವ ಮುನ್ನ 

               ಕಾಲ್ಕಿತ್ತೆಯಲ್ಲೇ


**********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35