🍎🍏🍒ಸೇಬೊಂದು ಫ್ರೆಶ್ 🍒🍎🍏
ಸೇಬೊಂದು ಫ್ರೆಶ್
ನನಗೀಗ ಕ್ರಶ್
ಪ್ರೀತಿ ಎಂಬ ಪದವು
ಹೆಜ್ಜೆ ಗುರುತು ಸಿಗದ ಫಿಶ್
ನೋಟವು ನಾಟಿದೆ
ನನ್ನನೆ ಕಾಡಿದೆ
ಪ್ರೀತಿಯ ಬೇಡಿದೆ
ನಿನ ಹೆಸರನು ಕೂಗಿದೆ
ಕಣ್ಣಸನ್ನೆ ಬಲು ಅರಿತ
ಮನಸ್ಸಲ್ಲಿ ನಿನ ಕೊರೆತ
ಹಸಿವೆಂಬ ಪ್ರೀತಿ ಇರಿತ
ಏರಿದೆ ಹೃದಯ ಬಡಿತ
ಸೇಬೊಂದು ಫ್ರೆಶ್
ನನಗೀಗ ಕ್ರಶ್
ಪ್ರೀತಿ ಎಂಬ ಪದವು
ಹೆಜ್ಜೆ ಗುರುತು ಸಿಗದ ಫಿಶ್
ನಗುವೊಂದು ಗುಲಾಬಿ
ಮಾತೆಲ್ಲ ಮುತ್ತಾಗಿ
ಸುರಿಯ ಬಾರಾದೆ ಜೇನಾಗಿ
ನಿನ್ನ ಪ್ರೀತಿಯು ನನಗಾಗಿ
ನವಿಲಿನ ನಾಟ್ಯದಂತೆ ನಡಿಗೆ
ಕೆನ್ನೆಗೆ ನಿನ ಇಟ್ಟ ಖಾಡಿಗೆ
ತುಟಿಯೊಂದು ತೊಂಡೆ
ನಿನು ಹಸಿರಾದ ಬೆಂಡೆ
ವರ್ಣಿಸಲು ನಿನ್ನ ಅಂದ
ಸಾಲದು ಪದ ಬಂದ
ನೀನೀಗ ಮಿಸ್
ಬೇಗ ಪ್ರೀತಿಯನು ಎಳು ಎಸ್
ಸೇಬೊಂದು ಫ್ರೆಶ್
ನನಗೀಗ ಕ್ರಶ್
ಪ್ರೀತಿ ಎಂಬ ಪದವು
ಹೆಜ್ಜೆ ಗುರುತು ಸಿಗದ ಫಿಶ್
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment