ಬಣ್ಣದ ಹೂವು
ಸಂಪಿಗೆ |
ಅಸೆ ಎಂಬ ಬಣ್ಣದ ಹೂವು ಮಿಂಚುತ ಬಂತು
ದುರಾಸೆ ಎಂಬ ಮುಳ್ಳಿನ ಗಿಡವ ತಂತು
ಹೂವನು ಮೂಡಿದ ಹೆಣ್ಣಿನ ಸೆಳೆತ
ನನ್ನ ಮನಸ್ಸಲಿ ಒಳಪಿನ ಕೊರೆತ
ಸುಂದರ ಹೂವಿನ ನಗೆಯವಳು
ಸಂಪಿಗೆ ಮುಡಿದು ಬಂದವಳು
ಪ್ರೀತಿಯ ಊಟ ಇಟ್ಟವಳು
ನನ್ನ ಎದೆಯ ಬಡಿತವೇ ನನ್ನವಳು
ಕಾಣದ ಅಸೆ ಏಕೋ ದುರಾಸೆ
ವಂಚಿಸಿ ಬಂತು ನನ್ನೆಡೆಗೆ
ಪ್ರೀತಿಯ ಅಮಲು ನಗುವಿನ ಕಡಲು
ಬರಸೆಳೆದು ಬಂತು ನಂಕಡೆಗೆ
ಏಕೋ ಇಗೆ ಯೋಚಿಸುವಾಗಲೇ
ಪ್ರೀತಿಯು ಬಳಿ ಬಂತು
ನಾನೆ ಅವಳು ಸಂಪಿಗೆ ಮುಡಿದವಳು
ನಿನ್ನಾಸೆಯು ಎಳು ನನಗೆ
ಪ್ರೀತಿಯ ನೋವು ತಾಳದೆ ನಾನು
ಹೇಳಿದೆ ಅವಳಿಗೆ ಹೈ ಲವ್ ಯು
ನನ್ನಯ ಕರೆಗೆ ಹೋಗಟ್ಟ ಸಂಪಿಗೆಯಿಂದ
ಉತ್ತರ ಬಂತು ನನಗೆ ಹೈ ಹೇಟ್ ಯು
ನೋವುನು ನುಂಗಿದೆ ಹೂವನು ಬೇಡಿದೆ
ಪ್ರೀತಿ ಕೊಡುವೆಯ ನನಗಾಗಿ
ಹೂವು ಹೇಳಿತು ನಾ ಮೂಡಿದ ಸಂಪಿಗೆ
ನಿನ್ನಯ ಪ್ರಾಣವ ಕೇಳಿತು ವಿಷವಾಗಿ
ಸಂಪಿಗೆ ಒಲವ ಹರಿಯಲು
ಚೆಲುವ ಬಯಸಿದೆ ತನಗಾಗಿ
ವಿಷದ ಹಾವು ವಂಚಿಸಿ ಬಂತು ಪ್ರಾಣವ ತೆಗಿಯುತು
ಪ್ರೀತಿಯ ನೆನಪು ತಿಳಿಯುವುದೊರಳಗಾಗಿ
ಸ್ನೇಹದಿ ಕರೆದು ಸಂಪಿಗೆ ಮುಡಿದು
ಬಂದು ನನ್ನ ಕರೆದವಳೇ
ಪ್ರೀತಿಯ ಹುಚ್ಚು ಹಿಡಿಸಿ ನನಗೆ
ಮೊಸಾದಿ ನನ್ನ ಕೊಂದವಳೇ
ಅಸೆ ಎಂಬ ಕುದುರೆಯ ಹೇರಿ ದುರಾಸೆಯ
ಲಗಾಮಿಲ್ಲದೆ ಕುದುರೆಯ ಬಿಟ್ಟವಳೇ
********ರಚನೆ. *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment