ಇದ್ದಾಗ ಸಾದಿಸು
ಇದ್ದಾಗ ಸಾದಿಸು |
ಸತ್ತಾಗ ಸುಟ್ಟರೆ ಬೂದಿಯಾಗುವೆ
ಊತಗ ಮಣ್ಣಲಿ ಮಣ್ಣಾಗುವೆ
ಇದ್ದಾಗ ಏನಾದರೂ ಸಾದಿಸು
ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು
ನೀನುಟ್ಟ ಬಟ್ಟೆ ನಿನಿಂದೆ ಬರಲಿಲ್ಲ
ನೀನಿಟ್ಟ ಗಂಟು ನೀ ಕೋಂಡಯೋಲಿಲ್ಲ
ನೀ ಮಾಡಿದ ಹೆಸರು ನಿನ್ನ ಕಥೆ ಹೇಳಿದೆಯೆಲ್ಲ
ನಿನ್ನ ಉಸಿರು ಯಾಕೋ ಇಂದು ಗಾಳಿಯಾಗಿದೆಯೆಲ್ಲ
ವಿಧಿ ಆಟ ಯಾರು ಬಲ್ಲವರಿಲ್ಲ
ಅವನಾಟದಂತೆ ಜೀವನ ನಡೆವುದೆಲ್ಲ
ಇದ್ದಾಗ ಬಾಳು ನೂರ ಜನ ಮೆಂಚುವಂತೆ
ಚಿಂತೆ ಬೇಡ ನಿನಗೆ ನೋಡಿ ನಗುವರೆಲ್ಲ
ಪ್ರೀತಿಸು ನಿನ್ನವರ ಬದುಕಿನ ಕೊನೆಯತನಕ
ಮರೆಯಾಗದಿರಲಿ ನಿನ್ನ ಹೆಸರು ಮರೆಯೋತನಕ
ಸಾದಿಸು ನೀನು ಕೊನೆ ಉಸಿರಿರುವತನಕ
ತೀರಿಸು ನೀನು ಈ ಮಣ್ಣ ಋಣ ಮುಗಿಯುವತನಕ
ನೋವ ಕೊಟ್ಟರು ನುಂಗಲಿ ದೇವರು
ಕಾಲು ಎಳೆಯೋರಿಗೆ ಕಾಲವೇ ಉತ್ತರಿಸಲಿ
ಪ್ರೀತಿ ಕೊಟ್ಟರು ಉಳಿಯಲಿ ಹೃದಯದಿ
ಪ್ರಾಣ ಹೋದಾಗ ತೆರೆಯಲಿ ಸ್ವರ್ಗ
ಮರೆತು ನೀನು ಹೋಗುವೆ ಈ ನರಕ
ಸತ್ತಾಗ ಸುಟ್ಟರೆ ಬೂದಿಯಾಗುವೆ
ಊತಗ ಮಣ್ಣಲಿ ಮಣ್ಣಾಗುವೆ
ಇದ್ದಾಗ ಏನಾದರೂ ಸಾದಿಸು
ಪ್ರಪಂಚದ ಒಳಿತಿಗಾಗಿ ಏನಾದರೂ ತಿಳಿಸು
********ರಚನೆ. ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment