ಓ ಯೇಸುವೇ
ಓ ಯೇಸುವೇ |
ಓ ಯೇಸುವೇ ನನ್ನ ಮೊರೆಯನು ಕೆಳೆಯ
ಬಳಲಿದ ಜೀವಕೆ ಆಸರೆ ಹಾಗೆಯೇ
ನಿನ್ನ ಪಾದಕೆ ನಮಸ್ಕರಿಸಿದೆ
ನನ್ನನು ನೀನು ಅರಸೆಯ
ಕಷ್ಟಗಳ ಸರಮಾಲೆಯಲಿ ನೊಂದು ಬೇಡಿದೆ
ನನ್ನ ಕರೆಗೆ ನೀ ತೋರು ಕೃಪೆಯ
ಜನದ ಜಂಗುಳಿಯಲಿ ನೋವು ಬಂದಿದೆ
ನನ್ನ ನೋವನು ನೀನು ನುಂಗೆಯ
ಒಂಟಿ ಜೀವವು ಜೊತೆಯ ಬೇಡಿದೆ
ಪ್ರೀತಿಯಲಿ ನೀ ಕರುಣಿಸೆಯ
ಯಾಕೋ ಏನೋ ಹೀ ಮನಸು ಬಳಲಿದೆ
ಈ ಜೀವಕೆ ಶಕ್ತಿ ನೀಡೆಯ
ಅಸೆ ಹೋತ್ತು ನಾ ಪುಸ್ತಕ ಓದಿದೆ
ವಿದ್ಯಾವಂತನ ನೀ ಮಾಡೆಯ
ನೂರು ದಾರಿಯೇ ನನ್ನ ಮುಂದಿದೆ
ಸರಿ ದಾರಿಯ ನೀ ತೊರೆಯ
ಪಾಪವೆಲ್ಲವು ಪುಣ್ಯವಾಗಲು ನಿನ್ನ ಕೂಗಿ
ನಾ ಕರದೇ ಬಂದು ನಿಲ್ಲೆಯ
ಓ ಯೇಸುವೇ ನಿನ್ನ ಬೇಡಿದೆ
ನಿನ್ನ ಕಂದನ ಮನ್ನಿಸೆಯ
*****ರಚನೆ ***-*
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment