ಕಣ್ಣ ನೋಟ



ಹುಡುಗಿ ನಿನ್ನ ಕಣ್ಣ ನೋಟ 

ಬಂದು ನನ್ನ ತಾಗಿತ್ತಲ್ಲ 

ನನ್ನ ಮನಸ್ಸು ಇಂದು  

ಯಾಕೋ ನಿನ್ನ ಕೂಗಿತಲ್ಲ 


ಕೇಳದೆಯೇ ಹೊರಟು ಹೋದೆ 

ಅಂದು ನೀನು ಸಂಜೆ 

ಕಾಯುತಿಹೆನು ನಿನ್ನ ದಾರಿ 

ಹುಟ್ಟು ಬಂದು ಪಂಜೆ 


ಏತಕ್ಕೆ ಏನೋ ಹಾಗಿದೆ 

ನನಗೆ ನಿನ್ನ ಮೇಲೆ ಪ್ರೀತಿ 

ಒಮ್ಮೆ ನಕ್ಕು  ನೀನು ಎಳೆಯ 

ನನಗು ಸ್ವಲ್ಪ ಪ್ರೇಮ ಐತಿ 


ನಿನ್ನ ಕಂಡ ನನಗೆ ಆಕಾಶದಿ. 

ನಕ್ಷತ್ರ ಮೂಡಿದಾಗೆ 

ನಿನು ಇಲ್ಲದ ಗಳಿಗೆ 

ಬಾನಿನಿಂದ ಉಲ್ಕೆ ಬಿದ್ದ ಹಾಗೇ 


ಆಗೆಯೇನು ನೀನು ನನ್ನ

 ಚೆಂದದ ಬಾಳ ಸಂಗಾತಿ  

ಹೃದಯ ಏಕೋ ಏಳುತಿದೆ 

ನೀನೇ ನನ್ನ ಮುದ್ದು ಹೆಂಡತಿ 


ಕಣ್ಣಿನಲ್ಲಿ ಕಣ್ಣ ಇಟ್ಟು 

ನೋಡಿಯೇನು ನನ್ನ 

ಮನುಸು ಏಕೋ ಬೇಡುತಿದೆ 

ನಿನ್ನ ಪ್ರೀತಿಯನ್ನ 


ಎಷ್ಟು ಕಾಡಿದರು ಬೇಡಿದರು 

ನೀನು ಕೇಳಲಿಲ್ಲ 

ಸೂರ್ಯನಂತೆ ಕೆಂಪಾಗಿ 

ನನ್ನ ಮನಸ್ಸು ಸುಟ್ಟೆಯಲ್ಲ 


ನಿನ್ನ ಕಣ್ಣ ನೋಟ ಮೋಸವೆಂದು 

ನನಗೆ ತಿಳಿಯಲಿಲ್ಲ 

ನಾನು  ಕಂಡ ಪ್ರೀತಿ ಕನಸು 

ಗಾಜಿನಂತೆ ಚೂರಾಯಿತಲ್ಲ 


ಬದುಕಿನಲ್ಲಿ ಕಾಡಿವೋದೇ 

ಪ್ರೀತಿಯನು ಕೊಂದುವೊದೆ 

ನೋಟದಿ ಚುಚ್ಚಿವೋದೇ ನೀನು 

ಬಾಳಲಿ ನೊಂದುವೊದೆ ನಿನ್ನ ಪ್ರೀತಿಗಾಗಿ ನಾನು 


ಸಮಯ ಕಳೆದ ಮೇಲೇ 

ನಿನ್ನ ನೆನಪು ಮೂಡಿ ಬಂತು 

ನೀನು ಹುಟ್ಟ ಹಸಿರು ಚೂಡಿ 

ನನ್ನ ಮನದಲ್ಲಿ ಇತ್ತು 


**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35