ಓ ದೇವನೇ ಶರಣಾದೆ
ಜೀವನಕೆ ಜೀವವವೇ ನೀನಾದೆ
ಹೃದಯದ ಬಡಿತವೇ ಯಾಕಾದೆ
ನೋವಿಗೆ ನಲಿವಿನ ಸಂಜಿವಿನಿಯಾದೇ
ಮಣ್ಣಿಗೆ ತಂಪೆರದ ಮಳೆಯಾದೆ
ಕಷ್ಟದಿ ಸುರಿದ ಬೆವರ ಹನಿಯಾದೆ
ಚಿಂತೆಯಲಿ ಬೆಂದ ಮನವು ಯಾಕಾದೆ
ಬೆಂಕಿಯಲ್ಲಿ ಸುಟ್ಟು ಬೂದಿ ಯಾದೆ
ತಂಬೂರಿಯಲಿ ಮೀಟಿದ ನಾದವದೆ
ಹಸು ಸುರಿಸಿದ ಅಮೃತದ ಹಾಲದೆ
ಆಕಾಶದಿ ನಕ್ಷತ್ರಗಳ ಹೊತ್ತ ನೀಲಿ ಭಾನಾದೆ
ಸೂರ್ಯನ ಕೆಂಪಾಗಿಸಿದ ಲಾವಾ ರಸವಾದೇ
ರಾತ್ರಿಯ ಬೆಳಗಿಸಿದ ಚಂದ್ರನಾದೇ
ಮೂರು ಕಣ್ಣು ಹೊತ್ತ ಏಳ ನೀರು ನಿನಾದೆ
ಹರಿಯುವ ನದಿಗೆ ಜುಳು ಜುಳು ಶಬ್ಧವಾದೇ
ಗಿಡವಾಗಿ ಮರವಾಗಿ ಹೂವು ಬಿಟ್ಟು ಹಣ್ಣಾದೆ
ಭೋರ್ಗರೆವ ಸಮುದ್ರದ ಅಲೆಯಾದೆ
ಓ ದೇವನೇ ಪ್ರಕೃತಿಯ ಸೃಷ್ಟಿಯು ನಿನ್ನಿಂದ
ಅ ನಿನ್ನ ಸೃಷ್ಟಿಯ ರಚನೆಗೆ ಸೋತು ಶರಣಾದೆ
*********ರಚನೆ, *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment