🌴🌴🌴ಬರಸಿಡಿಲು ಬಡಿದು🌴🌴🌴

 


ಕಾಣದ ಕಪ್ಪು ದಾರಿಗೆ 

ಬರಸಿಡಿಲು ಬಡಿದು 

ನೋವೆಂಬ ಮರಕೆ 

ಬೆಂಕಿಯ ಸಿಡಿದು 


ತುಸುದೂರ ನಿಂತಾಗ 

ಕಾರ್ಮೋಡ ಕವಿದು 

ಮಳೆಬಂದು ನೀರೆಲ್ಲ 

ಭೂಮಿಗೆ ಸುರಿದು 


ಹಸಿರಯ್ತು ನೆಲವು 

ಕೆರೆತುಂಬಿದ ಜಲವು 

ಬೆಳೆಬಂದು ನಿಂತು 

ತೆನೆಬಂದು ಕುಂತು 


ಸುಗ್ಗಿಯ ಕಾದ್ಯತೇ 

ಸಂಕ್ರಾಂತಿ ಬೇಡಯತಿ 

ಕೊನೆ ತುಂಬಿದ ಪಸಲು 

ತಾಕಲು ರೈತನ ವಸಲು 


ಮನೆತುಂಬಿದ ಬೆಳೆ 

ಮನದಲ್ಲಿ ಹೊಸ ಕಳೆ

ಸಂತೋಷವ ತಂತು 

ನವವರುಷವು ಬಂತು 


ಸಡಗರದೀ ಬಾಳು 

ಸುರಡಿಯ ನೆರಳು 

ತಂಪುನು ನೀಡಿ 

ಮನ ಕಲಕಿ ತುಡಿದ್ಯತಿ ಹಾಲಕ್ಕಿ ಹೇಳು 



************ರಚನೆ ********


ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ