ಹದಿಹರೆಯದ ವಯಸ್ಸು ಎಂದರೆ ಸುಮಾರು 10- 19 ವರ್ಷ ವಯಸ್ಸಿನವರನ್ನು ಹದಿ ಹರೆಯದವರು ಎಂದು ಕರೆಯುತ್ತೇವೆ. ಈ ಹದಿಹರೆಯದ ವಯಸ್ಸು ಬಾಲ್ಯ ವ್ಯವಸ್ಥೆಯಿಂದ ಪ್ರೌಢಾವಸ್ಥೆಯ ಮಧ್ಯೆ ಇರುವ ವಯಸ್ಸು. ಈ ವಯಸ್ಸಿನಲ್ಲಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ , ಸಾಮಾಜಿಕ ಪ್ರಭುದ್ಧತೆಯನ್ನು ಕಾಣುವ ಒಂದು ಸುಂದರ ವಯಸ್ಸು. ಹದಿಹರೆಯದ ವಯಸ್ಸಿನಲ್ಲಿ ಕ್ಷಿಪ್ರ ಬದಲಾವಣೆಗಳು, ಲೈಂಗಿಕ ಪ್ರಬುದ್ಧತೆ, ತನ್ನನ್ನು ತಾನು ತಿಳಿಯುವುದು, ವ್ಯಕ್ತಿತ್ವದ ತಿಳುವಳಿಕೆ, ವೃತ್ತಿಪರ, ಸಾಮಾಜಿಕ ದಾರಿಯಲ್ಲಿ ಚಿಂತನೆಗಳು ಶುರುವಾಗುತ್ತವೆ. ಇಂತಹ ವಯಸ್ಸಿನಲ್ಲಿ ತ್ವರಿತ ಬೆಳವಣಿಗೆಯ ಒತ್ತಡ ಮತ್ತು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆ ಲೈಂಗಿಕ ಪ್ರಭುದ್ಧತೆ, ಹೆಣ್ಣು ಮತ್ತು ಗಂಡಿನಲ್ಲಿ ಸಹಜವಾದ ಕ್ರಿಯೆಗಳು. ಈ ವಯಸ್ಸಿನಲ್ಲಿ ಹದಿಹರೆಯದವರು ಒಂಟಿತನ, ನಿರಾಕರಣೆಯ ಭಾವನೆ ಹಾಗೂ ತಮ್ಮ ಬಗ್ಗೆ ಬೇಸರ , ತಂದೆ ತಾಯಿಯ ಬಗ್ಗೆ ನಿರಾಸಕ್ತಿ ಯನ್ನು ಅನುಭವಿಸುತ್ತಾರೆ. ಹದಿಹರೆಯದ ವಯಸ್ಸು ಸುಂದರ ಕನಸು ಬೀಳುತ್ತವೆ ನೋಡಿದಂತೆ ಚಂದಿರ ತಾವು ನಡೆಯುವ ದಾರಿಯ ಅವರಿಗೆ ಮಂದಿರ ಸ್ವಲ್ಪ ಜಾರಿದರೆ ಜೀವನ ಒಂದು ಕಂದರ ಭಾರತ ದೇಶದ 1/5 ನೇ ಜನಸಂಖ್ಯೆಯ ಸುಮಾರು 10- 19 ವಯಸ್ಸಿನ ಹದಿ ಹರೆಯದವರಿಂದ ಕೂಡಿದೆ.ಸುಮಾರು 10 .1/5 ನೆ ವಯಸ್ಸಿನಿಂದ ಗಂಡು ಮತ್ತು ಹೆಣ್ಣುಗಳಲ್ಲಿ ಹಾರ್ಮೋನ್ ಗಳು ಸ್ರವಿಸಲು ಶುರುವಾಗುತ್ತವೆ. ಇದರಿಂದ ಅವರ ದೇಹದ ಅಂಗಾಂಗಗಳ ಆಕಾರಗಳು ಹಾಗೂ ದೈಹಿಕ ಬೆಳವಣಿಗೆಯ...