ವಚನಗಳು-40

 





ಮಾತಿನಲ್ಲಿ ಅಮೃತವನ್ನು ಇಟ್ಟು

ನಡೆನುಡಿಯಲ್ಲಿ ದಾರಿತಪ್ಪಿ

ಮಾಡುವ ಕೆಲಸಕ್ಕೆ ಕೆಡುಕ ಬಯಸಿ

ನೀತಿವಂತರಂತೆ ಕಾಯಕವ ಮಾಡಿಹರು-ನಮ್ಮ ಬಸವಣ್ಣ


ಆಚಾರವಂದು ನೆಪ ಮಾತ್ರ

ವಿಚಾರವೊಂದು ಕಥೆ ಮಾತ್ರ

ಮನದಲ್ಲಿ ಸೂತಕದ ಛಾಯೆ ಮೂಡಿ

ನಡೆನುಡಿಯಲ್ಲಿ ದ್ರೋಹ ತುಂಬಿಹುದು

ಕಾಯಕದಿ ನೀತಿವಂತರಂತೆ ನಟಿಸಿಹರು-ನಮ್ಮ ಬಸವಣ್ಣ


ಜಾತಿಯಲ್ಲಿ ದಿನವೂ ಮುಳುಗಿ

ಕಪಟ ಮೋಸವೆ ಮನತುಂಬಿ

ಹೇಳಿಹರು ನ್ಯಾಯ ನೀತಿ ಪಾಠ

ಲಿಂಗವ ಪೂಜಿಪನ ದ್ರೋಹಿಯಂತೆ ನೋಡಿಹರು

ಮಾಡುವ ಕಾಯಕಕ್ಕೆ ಮಣ್ಣು ಹಾಕಿಹರು-ನಮ್ಮ ಬಸವಣ್ಣ


********ರಚನೆ********

ಡಾ. ಚಂದ್ರಶೇಖರ್ ಸಿ ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35