ಆಗೀದೆ
ಹಾರುವ ಹಕ್ಕಿಗೆ ರೆಕ್ಕೆ ಬಂದರೆ
ಮುಗಿಲು ಮನೆ ಎಂಬಂತಾಗಿದೆ
ಬೆಳಗಿನ ಜಾವ ಕೊಳಿ ಕೂಗಲು
ಸೂರ್ಯ ಉದಯಿಸಿದಂತಾಗಿದೆ
ಬೇಸಿಗೆಯಲ್ಲಿ ಬಾಯರಿದವಾಗೆ
ನೀರು ಸಿಕ್ಕರೆ ಸ್ವರ್ಗವೇ ಸಿಕ್ಕಂತಾಗಿದೆ
ಸುಡುವ ಕಿರಣವು ಎಮ್ಮೆಯ ಸುಡಲು
ಕೇಸರೆ ಮನೆ ಎಂಬಂತಾಗಿದೆ
ಬಾಡುವ ಗಿಡದೀ ಮಲ್ಲಿಗೆ ಅರಳಿ
ಸುವಾಸನೆ ಬೀರದೆ ಬಿಟ್ಟಂತಾಗಿದೆ
ನೀಲಿ ಆಕಾಶದಿ ಮುಸುಕು ಬಂದರೆ
ಚುಕ್ಕಿಗಳಿಗೆ ಬರ ಬಂದತಾಗಿದೆ
ಸಮುದ್ರದ ನೀರಿಗೆ ಸಕ್ಕರೆ ಸುರಿದರೆ
ಉಪ್ಪಿನ ನೀರು ಸಿಹಿ ಅದಂತಾಗಿದೆ
ಕಂಡ ಕನಸು ಕಣ್ಣ ಮುಂದೆ ಬಂದರೆ
ಕವಿಯ ಕವನ ಮೂಡಿದಂತಾಗಿದೆ
ಸುರಿವ ಮಳೆಗೆ ಛತ್ರಿ ಇಡಿದರೆ
ಮಳೆಯು ನಿಂತಂತಾಗಿದೆ
ಮೆಯುವಾ ಕುರಿಯ ಕುತ್ತಿಗೆ ಕಡಿದರೆ
ಮಾಡಿದ ಪಾಪವು ಪುಣ್ಯವಾದಂತಾಗಿದೆ
*********ರಚನೆ********
ಡಾ.ಚಂದ್ರಶೇಖರ್ ಸಿ. ಹೆಚ್
Comments
Post a Comment