ವಚನಗಳು -39
ಪ್ರೀತಿಯಲ್ಲಿ ಒಲಿದ ದೇವರು ನೀನಯ್ಯ
ಮಸಣದಲ್ಲೂ ಪೂಜಿಸುವರು ನಿನ್ನಯ್ಯ
ಭಕ್ತಿಯಲ್ಲಿ ಪೂಜೆಯ ಮಾಡಿ ಬೇಡುವರು ನಿನ್ನಯ್ಯ
ಒಳ್ಳೆಯ ಕಾಯಕವ ಮಾಡದೆ ಬೇಡಿದರೆ
ಕೈಲಾಸ ದೊರಕುವುದು ಎಂತು -ನಮ್ಮ ಬಸವಣ್ಣ
ಅನ್ನದಲಿ ವಿಷವಿಟ್ಟು ಸುಷ್ಠಿ ತೆಗೆದಿಹರು
ನೀರಿನಲ್ಲಿ ದೇಹ ತೊಳೆದು ಗೊಚ್ಚೆ ಮಾಡಿಹರು
ಜೀವಿಯ ಜೀವಾಳ ತೆಗೆದು ನಿರ್ಜೀವಿ ಏನುತಿಹರು
ಮಗುವಿಲ್ಲದ ಹೆಣ್ಣಿಗೆ ಬಂಜೆ ಎಂದಿಹರು
ನೋವಿಲ್ಲದೆ ನಾಟಕದ ಕೆಲಸ ಮಾಡಿಹರು-ನಮ್ಮ ಬಸವಣ್ಣ
ಮನದಲ್ಲಿ ಹಾಲಾಹಲ ತುಂಬಿ
ಕಣ್ಣೆದುರು ನಾಟಕದ ಛಾಯೆತುಂಬಿ
ಕುಡಿವ ನೀರಲ್ಲಿ ಅಮೃತವ ತೆಗೆದು
ಕಾಯಕದಿ ಬೆರೆತವಗೆ ನೋವ ತಂದಿಹರು-ನಮ್ಮ ಬಸವಣ್ಣ
**********ರಚನೆ*********
ಡಾ.ಚಂದ್ರಶೇಖರ ಸಿ .ಹೆಚ್
Comments
Post a Comment