ಚುಟುಕು ಕವನ -9




ಜೀವನವೆಂಬುದು ಜೋಕಾಲಿ

ತೂಗಬೇಕು ಹಾಗೆ ನೀ ಬದುಕಲ್ಲಿ

ನೋವು ನಲಿವುಗಳ ಉಯ್ಯಾಲೆ

ಜೀವನ ಸಿಹಿಕಹಿ ನೆನಪಿನ ಸರಮಾಲೆ


ಬಾಳು ಎಂಬುದು ಒಂದು ಜಾತ್ರೆ

ಕಷ್ಟ ,ಸುಖಗಳ ಸವಿಯುವ ಪಾತ್ರೆ

ನುಂಗಬೇಕೂ ನೀ ನೆಮ್ಮದಿಯ ಮಾತ್ರೆ

ಬದುಕಿನ ಕೊನೆಯಲ್ಲಿ ಹೊರಡು ಯಾತ್ರೆ


ಕಷ್ಟ, ನೋವು ಎಂಬ ಕಹಿಯ ಗೆಲ್ಲು

ಆಸೆ ದ್ವೇಷಗಳ ಬುಡ ಕಿತ್ತು ನಿಲ್ಲು

ಬಾಳಲಿ ಬಾರದಿರಲಿ ಹಸಿ ಬಿಸಿ ಕನಸ ಜೊಲ್ಲು

ಬದುಕಲಿ ಬೀಳದೆ ಇರಲಿ ನೋವಿನ ಕಲ್ಲು

 

**********ರಚನೆ**********

ಡಾ.ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa