15.ಹದಿಹರೆಯದ ಕಳವಳಗಳು




ಹದಿಹರೆಯದ ವಯಸ್ಸು ಎಂದರೆ ಸುಮಾರು 10- 19 ವರ್ಷ ವಯಸ್ಸಿನವರನ್ನು ಹದಿ ಹರೆಯದವರು ಎಂದು ಕರೆಯುತ್ತೇವೆ. ಈ ಹದಿಹರೆಯದ ವಯಸ್ಸು ಬಾಲ್ಯ ವ್ಯವಸ್ಥೆಯಿಂದ ಪ್ರೌಢಾವಸ್ಥೆಯ ಮಧ್ಯೆ ಇರುವ ವಯಸ್ಸು. ಈ ವಯಸ್ಸಿನಲ್ಲಿ ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ , ಸಾಮಾಜಿಕ ಪ್ರಭುದ್ಧತೆಯನ್ನು ಕಾಣುವ ಒಂದು ಸುಂದರ ವಯಸ್ಸು.

ಹದಿಹರೆಯದ ವಯಸ್ಸಿನಲ್ಲಿ ಕ್ಷಿಪ್ರ ಬದಲಾವಣೆಗಳು, ಲೈಂಗಿಕ ಪ್ರಬುದ್ಧತೆ, ತನ್ನನ್ನು ತಾನು ತಿಳಿಯುವುದು, ವ್ಯಕ್ತಿತ್ವದ ತಿಳುವಳಿಕೆ, ವೃತ್ತಿಪರ, ಸಾಮಾಜಿಕ ದಾರಿಯಲ್ಲಿ ಚಿಂತನೆಗಳು ಶುರುವಾಗುತ್ತವೆ. ಇಂತಹ ವಯಸ್ಸಿನಲ್ಲಿ ತ್ವರಿತ ಬೆಳವಣಿಗೆಯ ಒತ್ತಡ ಮತ್ತು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆ ಲೈಂಗಿಕ ಪ್ರಭುದ್ಧತೆ, ಹೆಣ್ಣು ಮತ್ತು ಗಂಡಿನಲ್ಲಿ ಸಹಜವಾದ ಕ್ರಿಯೆಗಳು. ಈ ವಯಸ್ಸಿನಲ್ಲಿ ಹದಿಹರೆಯದವರು ಒಂಟಿತನ, ನಿರಾಕರಣೆಯ ಭಾವನೆ ಹಾಗೂ ತಮ್ಮ ಬಗ್ಗೆ ಬೇಸರ , ತಂದೆ ತಾಯಿಯ ಬಗ್ಗೆ ನಿರಾಸಕ್ತಿ ಯನ್ನು ಅನುಭವಿಸುತ್ತಾರೆ.

ಹದಿಹರೆಯದ ವಯಸ್ಸು ಸುಂದರ

ಕನಸು ಬೀಳುತ್ತವೆ ನೋಡಿದಂತೆ ಚಂದಿರ

ತಾವು ನಡೆಯುವ ದಾರಿಯ ಅವರಿಗೆ ಮಂದಿರ

ಸ್ವಲ್ಪ ಜಾರಿದರೆ ಜೀವನ ಒಂದು ಕಂದರ


ಭಾರತ ದೇಶದ 1/5 ನೇ ಜನಸಂಖ್ಯೆಯ ಸುಮಾರು 10- 19 ವಯಸ್ಸಿನ ಹದಿ ಹರೆಯದವರಿಂದ ಕೂಡಿದೆ.ಸುಮಾರು 10 .1/5 ನೆ ವಯಸ್ಸಿನಿಂದ ಗಂಡು ಮತ್ತು ಹೆಣ್ಣುಗಳಲ್ಲಿ ಹಾರ್ಮೋನ್ ಗಳು ಸ್ರವಿಸಲು ಶುರುವಾಗುತ್ತವೆ. ಇದರಿಂದ ಅವರ ದೇಹದ ಅಂಗಾಂಗಗಳ ಆಕಾರಗಳು ಹಾಗೂ ದೈಹಿಕ ಬೆಳವಣಿಗೆಯಾಗುತ್ತದೆ ಮತ್ತು ಹುಡುಗ 8 ಇಂಚು ಬೆಳೆದರೆ ಹುಡುಗಿಯು ಪ್ರೌಢಾವಸ್ಥೆಯಲ್ಲಿ 6 ಇಂಚು ಬೆಳೆಯುತ್ತಾಳೆ ಹಾಗೂ ಅವರ ಅಂಗಾಂಗಗಳು ಬೆಳೆಯುತ್ತವೆ ,  ಈ ವಯಸ್ಸಿನಲ್ಲಿ ಅಡ್ರೆನಲ್ ಸ್ಟೆರಾಯ್ಡ್ ಸ್ರವಿಕೆ ಕಾರಣವಾಗಿರುತ್ತದೆ.

ಹದಿಹರೆಯದ ವಯಸ್ಸಿನ ಹುಡುಗರಲ್ಲಿ  ಟೆಸ್ಟೋಸ್ಟಿರೋನ್ ಮತ್ತು ಆಂಡ್ರೋಜನ್ ಗಳು ಸರ್ವಿಸುತ್ತವೆ , ಹುಡುಗಿಯರಲ್ಲಿ ಈಸ್ಟ್ರೋಜೆನ್ ಸ್ರವಿಸುತ್ತವೆ ಈ ಕಾರಣದಿಂದ ಲೈಂಗಿಕ ಅಂಗಾಂಗಗಳು ಬೆಳವಣಿಗೆಯಾಗುತ್ತವೆ.ಹದಿಹರೆಯದ ವಯಸ್ಸಿನಲ್ಲಿ ಹುಡುಗ ಮತ್ತು ಹುಡುಗಿಯರ ಜೀವನಶೈಲಿಗಳು ಬದಲಾವಣೆಯಾಗುತ್ತವೆ ಹಾಗೂ ದೈಹಿಕ ಸದೃಢತೆ, ವ್ಯಾಯಾಮ, ಧೂಮಪಾನ ಮಾಡುವುದು, ಮಾದಕ ವಸ್ತುಗಳ ಸೇವನೆ , ಲೈಂಗಿಕ ಚಟುವಟಿಕೆ ಬಗ್ಗೆ ಹೆಚ್ಚು ಆಸಕ್ತಿ ಇಂತಹುಗಳಿಂದ ವಾಹನ ಅಪಘಾತ , ಗರ್ಭಧಾರಣೆ, ಲೈಂಗಿಕ ಕಾಯಿಲೆಗಳು ಶುರುವಾಗುತ್ತದೆ ಹದಿಹರೆಯದವರ ಬಗ್ಗೆ ತಂದೆ ತಾಯಿಯರು, ವೈದ್ಯರು, ಆರೋಗ್ಯ ಕೇಂದ್ರಗಳು, ಶಾಲೆಯ ಶಿಕ್ಷಕರು, ಸಮಾಜವು ಜಾಗರೂಕವಾಗಿ ಇರಬೇಕಾಗುತ್ತದೆ.

ಹದಿಹರೆಯದ ವಯಸ್ಸಿನವರು ಲೈಂಗಿಕ ಆಸಕ್ತಿಗಳು ಸ್ರವಿಸುವ ಹಾರ್ಮೋನ್ಗಳಿಂದ ಹೆಚ್ಚಾಗಿ ಅವರು ನಿಯತಕಾಲಿಕೆಗಳು, ಪತ್ರಿಕೆಗಳು ,ಲೈಂಗಿಕ ಸಿನಿಮಾ ಜಾಹೀರಾತುಗಳು, ಸಿನಿಮಾ ಮಂದಿರದ ಅಶ್ಲೀಲ ಪೋಸ್ಟರ್ ಗಳು ಹಾಗೂ ದೂರದರ್ಶನದಲ್ಲಿ ಪ್ರಸಾರವಾಗುವ ಸಿನಿಮಾ ಮತ್ತು ಧಾರವಾಹಿಗಳು ಹಾಗೂ ಶಾಲೆಯ ಹುಡುಗ ಹುಡುಗಿಯರ ನಡವಳಿಕೆಗಳು ಇವುಗಳಿಂದ ಪ್ರೇರಿತವಾಗಿ ಪ್ರೌಢಾವಸ್ಥೆಯ   ಮುಂಚೆಯೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತರಾಗಿ ತಮ್ಮ ಉತ್ತಮ ಭವಿಷ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ.


ಹದಿಹರೆಯದ ವಯಸ್ಸು ಮಳ ಮಳ

ಭಾವನೆಗಳ ಬಣ್ಣವು ಪಳಪಳ

ಉಡುಗೆ ತೊಡುಗೆ ಜಳ ಜಳ

ಎದೆಯ ಗೂಡಲ್ಲಿ ಏಕೋ ತಳಮಳ


ಎಲ್ಲಾ ತಂದೆ ತಾಯಿಯರು ನಿಮಗೆ ತಿಳಿದಿರಲಿ , ಈ ವಯಸ್ಸೆ ಅಂತಹುದು ಅವರಲ್ಲಿ ಸ್ರವಿಸುವ ಹಾರ್ಮೋನ್ ಗಳು ಅವರ ಮನಸ್ಸನ್ನು ಮಂಗನಂತೆ ಕುಣಿಸುತ್ತವೆ .ಇದರಿಂದ ಯಾರೂ ಕೂಡ ಹೊರತಲ್ಲ, ಇಂತಹ ವಯಸ್ಸಿನಲ್ಲಿ ಆಹಾರದ ಪೌಷ್ಟಿಕಾಂಶ ಕೊರತೆಯಿಂದ ಆರೋಗ್ಯ ಮತ್ತು ಬೆಳವಣಿಗೆಯ ಏರುಪೇರು ಆಗುತ್ತದೆ ಇದರಿಂದ ಹದಿಹರೆಯದವರ ಶೈಕ್ಷಣಿಕ ಅವನತಿ , ಸಾಮಾಜಿಕ ಬೆಳವಣಿಗೆ ಕುಂಠಿತವಾಗುತ್ತದೆ..

ಹದಿಹರೆಯದ ವಯಸ್ಸಿನವರ ಸಮತೋಲನ ಬೆಳವಣಿಗೆಗೆ ಪೌಷ್ಟಿಕಾಂಶ ಆಹಾರದ ಶಕ್ತಿ ಅಗತ್ಯ .ಈ ವಯಸ್ಸಿನಲ್ಲಿ ಪ್ರತಿಯೊಬ್ಬ ಹುಡುಗನಿಗೆ 2500 ರಿಂದ 2800 ಕ್ಯಾಲೋರಿ ಶಕ್ತಿ ಬೇಕಾಗುತ್ತದೆ.ಹದಿಹರೆಯದವರಲ್ಲಿ ಬೊಜ್ಜು, ದೇಹದ ತೂಕ ಹೆಚ್ಚಾಗುವುದು, ರಕ್ತ ಹೀನತೆ, ಸಾಮಾಜಿಕ ಸಂಪರ್ಕ, ಥೈರಾಯ್ಡ್ ಬೆಳವಣಿಗೆ , ಮೈಬಣ್ಣ, ಮುಖದಲ್ಲಿ ಮೊಡವೆಗಳು ಮುಂತಾದ ದೈಹಿಕ ಮಾನಸಿಕ ಮತ್ತು ಆರೋಗ್ಯ ಬದಲಾವಣೆಗಳು ಸಹಜವಾಗಿರುತ್ತದೆ.

ಹದಿಹರೆಯದ ವಯಸ್ಸಿನಲ್ಲಿ ತಂದೆ ತಾಯಿಯರಿಂದ ಮುಕ್ತ ಚಿಂತನೆಯನ್ನು ಹುಡುಗ ಹುಡುಗಿಯರು ಮಾಡುತ್ತಾರೆ. ಈ ವಯಸ್ಸಿನವರಿಗೆ ತಂದೆ ತಾಯಿಯರು ಹೇಳುವ ಆ ಕೆಲಸವನ್ನು ಮಾಡು ಮತ್ತು ಈ ಕೆಲಸವನ್ನು ಮಾಡು , ಇವರಿಗೆ ಇಷ್ಟವಾಗುವುದಿಲ್ಲ , ತಂದೆ ತಾಯಿಯರು ಅವರನ್ನು ನಿಯಂತ್ರಿಸಲು ಹೋದರೆ ಜಗಳಗಳು ಶುರುವಾಗುತ್ತದೆ. ಇಂತಹ ಸಮಯದಲ್ಲಿ ತಂದೆ ತಾಯಿಯರು ಸಂಯಮ ಮತ್ತು ಶಿಸ್ತಿನಿಂದ ಮಕ್ಕಳನ್ನು ಬೆಳೆಸಬೇಕಾಗುತ್ತದೆ. ಹದಿಹರೆಯದವರನ್ನು ಸ್ವತಂತ್ರಕ್ಕೆ ಬಿಟ್ಟು ಅವರ ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಡುವುದರಿಂದ ಹಾಗೂ ತಂದೆ ತಾಯಿಯರು ಕುಟುಂಬದ ವಿಷಯಗಳಲ್ಲಿ ಮುಕ್ತ ಚರ್ಚೆ ಉತ್ತಮ ಹಾಗೂ ಗೆಳೆಯರು ಎಲ್ಲರೂ ಒಂದೇ ವಯಸ್ಸಿನವರಾಗಿರುವುದರಿಂದ ಸಮಸ್ಯೆಗಳು ಒಂದೇ ಆಗಿರುತ್ತವೆ ಮತ್ತು ಈ ವಯಸ್ಸಿನಲ್ಲಿ ಮಾತು ನಡೆ ಉಡುಗೆತೊಡುಗೆ ವಿನ್ಯಾಸಗಳ ಆಕರ್ಷಣೆಗೆ ಒಳಗಾಗಿರುತ್ತಾರೆ.


ಹದಿಹರೆಯದವರಿಗೆ ಶಿಕ್ಷಕರ ಪಾತ್ರ ತುಂಬಾ ಮುಖ್ಯ , ಕಡಿಮೆ ತರಬೇತಿ ಪಡೆದ ಶಿಕ್ಷಕರು , ಜಾಸ್ತಿ ಕೆಲಸ , ಕಠಿಣ ಪಠ್ಯಕ್ರಮ ಇವು ವಿದ್ಯಾರ್ಥಿಗಳಲ್ಲಿ ನಕಾರಾತ್ಮಕತೆಯನ್ನು ಉಂಟುಮಾಡುತ್ತವೆ ಹಾಗೆ ತಂದೆ ತಾಯಿಯರ ರೀತಿ ಶಿಕ್ಷಕರ ಪೋಷಣೆ ,ಸರಿದಾರಿಯಲ್ಲಿ ನಡೆಯಲು ವಿದ್ಯಾರ್ಥಿಗಳಲ್ಲಿ ಸಹಾಯವಾಗುತ್ತದೆ.


ಹದಿಹರೆಯದವರು ಈ ಕೆಲವು ಸಮಸ್ಯೆಗಳಿಗೆ ಒಳಗಾಗಿರುತ್ತಾರೆ.


1. ಪೌಷ್ಟಿಕಾಂಶದ ಕೊರತೆ

2. ಆತ್ಮಹತ್ಯೆ ನಿರ್ಧಾರ

3. ಗೆಳೆಯರ ಒತ್ತಡ

4. ವೈಯುಕ್ತಿಕ  ಸಮಸ್ಯೆ

5. ಸಾಮಾಜಿಕ ಸಮಸ್ಯೆ

6. ಜೈವಿಕ ಸಮಸ್ಯೆ

7. ಹದಿಹರೆಯದ ಗರ್ಭಧಾರಣೆ


ಈಗ ನೀವೇ ಹೇಳಿ ಹದಿಹರೆಯದ ಸಮಸ್ಯೆಗೆ ಪರಿಹಾರವೇನು???


ಉಕ್ಕುತ್ತಿದೆ ವಯಸ್ಸಿನ ಪ್ರಾಯ

ಮನಸ್ಸಿನ ತುಂಬಾ ಯೋಚನೆಯ ಗಾಯ

ದೈಹಿಕ ಬದಲಾವಣೆಯ ಚಾಯ

ಹೇಗೆ ಮಾಡಲಿ ಹದಿಹರೆಯದ ಸಮಸ್ಯೆಯ ಮಾಯ


ಹದಿಹರೆಯದವರು, ತಂದೆ ತಾಯಿಯರು ಮತ್ತು ಶಿಕ್ಷಕರು ಹಾಗೂ ಸಾಮಾಜಿಕ ವ್ಯವಸ್ಥೆ ಉತ್ತಮವಾಗಿದ್ದರೆ ಹದಿಹರೆಯದವರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಇಲ್ಲವೆಂದಲ್ಲಿ ಅವರ ಜೀವನಕ್ಕೆ ಆ ವಯಸ್ಸು ಒಂದು ಭಯ ಆಗೋದರಲ್ಲಿ ಯಾವುದೇ ಸಂಶಯವಿಲ್ಲ.


********ಲೇಖಕರು********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20