ಎಲೆಕ್ಷನ್ ಬಂತು
ಐದು ವರ್ಷದ ಎಲೆಕ್ಷನ್ ಬಂತಂತೆ
ಎಲ್ಲರಿಗೂ ಏಕೋ ಮತದಾನದ ಚಿಂತೆ
ಒಂದು ಪಕ್ಷದೊನು ಬಂದು ತೊಡೆ ತಟ್ಟಿ
ಒಂದು ಓಟಿಗೆ ಸಾವಿರ ರೂಪಾಯಿ ಕೊಟ್ಟನಂತೆ
ಇನ್ನೊಂದು ಪಾರ್ಟಿ ಅವನು ಸೀರೆ ಕೊಟ್ಟು
ಐದುನೂರು ಕೊಟ್ಟು ಕೈ ಮುಗಿದನಂತೆ
ಮತ್ತೊಂದು ಪಕ್ಷ್ದೋನು ಬಂದು ಕುಕ್ಕರ್ ಕೊಟ್ಟು
ರಾಗಿ ಕೊಯ್ಯುವ ಮಹಿಳೆಗೆ ನಿಮ್ಮ ಮತ ಒತ್ತಿ ಅಂದನಂತೆ
ಊರು ಹೈಕಳು ಎಣ್ಣೆ ಒಡೆದು
ಬಾಡೂಟ ತಿಂದು, ಮಸ್ತು ಎಂಜಾಯ್ ಮಾಡವರೆ
ಯಾರಿಗೆ ಓಟು ಹಾಕಲಾ ಮಗ ಎಂದು
ಚಿಂತೆ ಮಾಡ್ತಾ ಕುಂತವರೆ
ಆಂಟಿಯರು ಸೀರೆಗಾಗಿ ಕಾದು ನಿಂತವರೆ
ಅಂಕಲ್ ಗಳು ಚಡ್ಡಿ ಒಳಗೇ ಬಿಡಿ ಬೆಂಕಿ ಪಟ್ಟಣ ತುಂಬವರೆ
ಪೊಲೀಸ್ ಅಪ್ಪ ಟ್ರಾಫಿಕ್ ನಲ್ಲಿ ಕಾದು ಕೂತು
ಯೆಂಡ ಮತ್ತು ನೋಟು ಇಡಿದು ಕುಂತವರೆ
ನಮ್ಮನು ಆಳುವ ದೊರೆಗಳು ಭಾಷಣ ಬಿಗಿತವರೆ
ಮತ್ತೆ ನಾವು ಅಧಿಕಾರಕ್ಕೆ ಬಂದ್ರೆ
ದೇಶ ಚೇಂಜ್ ಮಾಡ್ತೀವಿ ಅಂತಾರೆ
ದೇಶದ ಸಾಲ ಏರಿಸಿ ನಮ್ಮನು ಶೂಲಕೆ ತಳ್ವರೆ
ಭರವಸೆಗಳು ನೂರು ಈಡೇರುವುದು ಮೂರು
ಪೇಪರ್ ತುಂಬಾ ಹಗರಣ ನೋಡೀ ಸಾಕಾಯ್ತು
ರೈತ ಬೆಳೆದ ಬೆಳೆಗೆ ಕಿಮ್ಮತ್ತ ಇಲ್ಲದೆ ಕುತ್ತಿಗೆ ನೇಣು ಬಿಗಿದಾಯ್ತು
ಒಟಿಗೆ ನೋಟನು ತೆಗೆದುಕೊಂಡು
ಜೀವನ ಅಡವಿಟ್ಟು ಒಂದ ನೈಂಟಿ ಓಡೆದಾಯ್ತು
ಐದು ವರ್ಷ ಪೇಪರ್ ತುಂಬಾ ನಿವ್ಸ್ ಕೇಳಿ
ಬೇಸಗೆಲಿ ತಣ್ಣೀರು ಕುಡಿದಂತೆ ಆಯ್ತು
ನೋಟು ಎತ್ತು ಓಟು ಒತ್ತು
ದೇಶಕೆ ಬ್ರಷ್ಟಾಚಾರದ ಬೆಂಕಿ ಬಿತ್ತು
ಮತದಾನ ನಿಮ್ಮ ಹಕ್ಕು ಕುಡಿದು ತಿಂದು ಕಕ್ಕು
ನಮ್ಮ ದೇಶ ವಿಶ್ವ ಗುರು ,ನೋಡು ಎಲೆಕ್ಷನ್ ಕಾರುಬಾರು
ನಮ್ಮ ಮತ ದೇಶಕ್ಕೆ ಇತಾ
********ರಚನೆ**********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment