ಚುಟುಕು ಕವನ-5
ನನ್ನವಳು ಆಕಾಶದ ಚುಕ್ಕಿ
ನನ್ನ ಮನಸ್ಸಿನ ಪ್ರೀತಿ ಹಕ್ಕಿ
ನನ್ನ ಪ್ರೀತಿ ಕದ್ದಳು ಹೊಕ್ಕಿ
ಹೊರಟೆ ಹೋದಳು ಹದ್ದಂತೆ ಕುಕ್ಕಿ
ನನ್ನವಳ ಹೆಸರು ನಯನ
ಸುಮ್ನೆ ಹಿಡುಕೊಂಡೆ ಕೈನಾ
ಸಿಡುಕು ಮುಟ್ಟಿದರೆ ಮೈನಾ
ಕೊನೆಗೂ ಕೊಟ್ಟಳು ಲೈನಾ
ನನ್ನವಳು ಭಾವನೆ ತುಂಬಿದ ಕಳ್ಳಿ
ಮನಸ್ಸೂ ಮುದ್ದಾದ ಹೂವು ಬಳ್ಳಿ
ಪ್ರೀತಿ ಇದ್ದರೂ ತೋರಿಸದ ಮಳ್ಳಿ
ಇವಳೇ ನೋಡೀ ನನ್ನಾ ಚೆಂದುಳ್ಳಿ
**********ರಚನೆ********
ಡಾ.ಚಂದ್ರಶೇಖರ್. ಸಿ ಹೆಚ್
Comments
Post a Comment