Posts

Showing posts from December, 2020

🏍️🏍️ ನಮ್ಮ ಸಾವರಿ 🏍️🏍️

ದಾರಿಯಲ್ಲಿ ಬೈಕು ಹೇರಿ  ಹೊರಟಿತು ನಮ್ಮ ಸಾವರಿ  ಅಕ್ಕ ಪಕ್ಕ  ಮರದ ಸಾಲು  ಕೈ ಬಿಸಿ ಕರೆದ ಹೊನಲು  ತಂಗಾಳಿಯಲಿ ನಾವು ತೇಲಿ  ತೂಗಿದಂತೆ ಬೈಕ್ ಗಾಲಿ  ಕ್ರಮಿಸಿದೆವು ತುಂಬಾ ದೂರ  ಮರೆತು ನಮ್ಮ ನೋವ ಭಾರ   ಲಕ್ಕವಳ್ಳಿ ಡ್ಯಾಮ್ ಬಂತು  ನೀರು ಹಾಲಿನಂತೆ ಸುರಿಯುತಿತ್ತು  ನೋಡಲೆಷ್ಟು ಚೆಂದ  ತುಂಬಿದ ಡ್ಯಾಮ್ ಅಂದ  ಮತ್ತೆ ಹೊರಟ ನಮ್ಮ ಪಯಣ  ಆಗುಂಬೆಯ ಸೂರ್ಯನ ಸ್ವರ್ಣ  ಘಾಟಿಯಲ್ಲಿ ರಸ್ತೆ ತಿರುವು  ಖುಷಿಗೆ ಲಗ್ಗೆ ಇಟ್ಟ ಒಲವು  ಬೆಟ್ಟದ ಕೆಳಗಿನ ಊರು  ಕೃಷ್ಣನಾ ತವರೂರು  ದರ್ಶನ್ ಪಡೆದ ಮನ  ಹೇಳಿತು  ಉಡುಪಿ ಕೃಷನಿಗೆ ನಮನ  ಸಮುದ್ರದ ಕಡಲ ತೀರ  ಮರಳಿನಲ್ಲಿ ರಚಿಸಿದ ತೇರಾ  ಅಲೆ ಬಂತು ರಭಸದಲ್ಲಿ  ಕೊಚ್ಚ್ಚಿ ಹೋಯಿತು ಗೋಪುರ  ಮನಸ್ಸು ಏಕೋ ತುಂಬಾ ಶಾಂತ  ಪ್ರೀತಿಸಿದ ಹುಡುಗಿ ಕಾಂತಾ  ಸುತ್ತುತ ಊರು ಊರು  ಸಾಗಿತು ನಮ್ಮ ಒಲವ ತೇರು  ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

☘️☔️ಹಾ ಕ್ಷಣ ☔️☘️

ಮುಂಗಾರು ಮಳೆಯಾಗಿ  ಮರವೆಲ್ಲ ಹಸಿರಾಗಿ  ಕಾಡೆಲ್ಲಾ ಸೊಂಪಾಗಿ  ಗಾಳಿಯು ಜೋರಾಗಿ  ಬಿಸಿದಾ ಹಾಗಿದೆ ನನ್ನ ಈ ಮನ  ನಿನ್ನನ್ನು ನಾ ಕಂಡ ಹಾ ಕ್ಷಣಾ  ಪ್ರೀತಿಯು ಮೊಗ್ಗಾಗಿ  ಹಾ ಮೊಗ್ಗು ಹೂವಾಗಿ  ಜೇನೊಂದು  ಮುತಿಟ್ಟು  ಮಕರಂದ ಹೀರಿದ  ಹಾಗಿದೆ ನನ್ನ ಈ ಮನ  ನಿನ್ನ ಮುಟ್ಟಿದ ಹಾ ಕ್ಷಣ  ಜೇನೊಂದು ಊಟಿ ಕಟ್ಟಿ  ಮಕರಂದ ಹರಿ ಬಿಟ್ಟಿ  ಸಿಹಿಯನ್ನು ಕೂಡಿಟ್ಟಿ  ರುಚಿ ನೋಡಲು ಕರೆದಂತಿದೆ  ನನ್ನ ಈ ಮನ  ನೀ ಸೋಕಿದ ಹಾ ಕ್ಷಣ  ಬಂದೆಯಾ ಊರಿಗೆ  ಬರುವೆಯಾ ನೀರಿಗೆ  ನೀರು ತುಂಬಿದ ಬಿಂದಿಗೆ  ನನಗೇಕೋ ಬಾಯಾರಿಕೆ  ಕುಡಿದಾಗ ನನ್ನ ಈ ಮನ  ನಿನ ಪ್ರೀತಿ ಸವಿದ ಹಾ ಕ್ಷಣ  ಮನಸಲಿ ಯಾತನೆ  ಯಾತಕೋ ವೇದನೆ  ನಿನಗಾಗಿ ರೋಧನೆ  ನೀನು ಇರದ ನನ್ನ ಈ ಮನ  ನೀ ಮರೆಯದಾ ಹಾ ಕ್ಷಣ  *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

📌📍ಮುಳ್ಳಾಗಿದೆ ಮನಸ್ಸು 📌📍

ಮುಳ್ಳಾಗಿದೆ ಮನಸ್ಸು ಕಣ್ಣಿರಲಿ  ಕನಸಾಗಿದೆ ನನಗೆ ನಿನ್ನ   ಪ್ರೇಮದ ಬಲೆಯಲ್ಲಿ  ಒಲವಾಗಿದೆ ನಿನ್ನ ಹಟದಲ್ಲಿ  ಸೆರೆಯಾಗುವೆ ನಾನು ನಿನ್ನ  ನೋಟದಲಿ  ಮಗುವಾಗುವೆ ನಾನು   ನಿನ್ನ  ಪ್ರೀತಿ ಕಡಲಲಿ  ಪ್ರೀತಿಸುವೆ ನಿನ್ನ ನಾನು  ಪ್ರೀತಿಯ ನಲಿವಲಿ  ಸಾಕುವೆ ನಿನ್ನ ನಾನು ಅಂಗೈಲಿ  ಕೊಡುವೆಯ ಪ್ರೀತಿಯನು  ನಿನ್ನ ಪುಟ್ಟ ಹೃದಯದಲಿ  ನಿನ್ನ ನಗುವೇ ನನ್ನ ಕನಸು  ಪ್ರೀತಿಯಲಿ ಎಳು ಬಿಚ್ಚಿ ಮನಸು  ಪೂರೈಸುವೆ ನಾನು ನಿನ್ನ ಕನಸ್ಸು ಸೊಗಸಲ್ಲವೇ ಈ ಪ್ರೀತಿಯ ವಯಸ್ಸು  ನಗುತಾ ನಲಿವ ನಾವು  ಸವಿಯುತ ಜೀವನದ ನನಸ್ಸು *******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್ 

⛱️🌈ಬದುಕಿನ ಬಣ್ಣ 🌈☔️

ಬದುಕಿನ ಬಣ್ಣ ಬಾಯ್ತೆರೆದಾಗ  ಜೀವನಕೆಲ್ಲಿದೆ ಸೊಗಸು  ಸುಡುವ ಬೆಂಕಿಗೆ ನೀರರೇದಾಗ ಕೆಂಡದ ನನಸೊಂದು ಕನಸು  ಮನಸಲಿ ಕೋಲಾಹಲದ ಕೆಂಡ  ಸೃಷ್ಟಿಸಿದೆ ನನ್ನ ಈ ವಯಸ್ಸು  ಅರಿಯುವ ಮುಂಚೆ ತಾಗಿದರೆ ಕೆಂಡ  ಜೀವನವೇ ಸುಟ್ಟಂತ ಕನಸು ಕಾಮನಬಿಲ್ಲಿನ ಬಣ್ಣವು ನನ್ನಯ ಮನದ ದಿರಿಸು  ಮೋಡವು ಮರೆಮಾಡಿ ಸಿಡಿಲೊಂದು ಜೊತೆಗೂಡಿ  ಮಳೆ ಹನಿಯು ಬೂಮಿಗೆ  ಬಿದ್ದಂತೆ  ಸೊಗಸು  ನಾ ನಡೆವ ದಾರಿಯು ಬೆಂಕಿಯು ಸುಟ್ಟಂತೆ  ಮುಳ್ಳೊoದು  ನನ್ನೆದೆಯ ಚುಚ್ಚಿ  ಇರಿದಂತೇ ಯಾಕಿ ನನಗಿ ಕನಸು  ನೋವೊಂದು ಮನೆಮಾಡಿ  ಮಂಜಲ್ಲಿ  ಕೆಂಡವು ಕರಗಿದಾಗಿದೆ  ನೀ ಕೊಟ್ಟ ಒಲವಿನ ಬಣ್ಣ  ನೀ ಮೂಡಿದ ಹೂವೊಂದು ಹೇಳಿದೆ  ನಾನೀಗ ನೀರಲ್ಲಿ ಬೆಂದ ಸುಣ್ಣ  ಯಾಕೀಗೆ ಯಾತನೆ ಮನದಲ್ಲಿ ವೇದನೆ  ನೀರಿಲ್ಲದ ಮರುಬೂಮಿಯ ರೋಧನೆ ಬಂಜರು ನೆಲ್ಲದಲ್ಲಿ ಮುಂಗಾರು ಮಳೆ ಹನಿ ಬಿದ್ದಂತೆ  ನೀನಗಾಗಿ ನಾ ಕಾದು  ಕೊನೆಯಾಗೋ ಜೀವಕೆ  ಗುಟುಕೊಂದು ಸಿಕ್ಕಂತೆ ಸುಡುವ ಬೇಸಿಗೆ ಕೊರೆವ ಚಳಿಗೆ  ಮೈಮನ ಮಾಗಿದೆ  ಬೆಂದ ಮನವು ನೊಂದ ಒಲವು  ಕಥೆಯ ಹೇಳಿದೆ  ಕೆಣಕುವ ವಯಸ್ಸು ಹದಿಹರೆಯದ ಕನಸು  ಹೆಚ್ಚರವಿಲ್ಲದೆ ಹೋದರೆ  ಬಾಳ್ಳೊoದು ಬೂದಿಯ ಬಣ್ಣ   ಪ್ರೀತಿಯ ಜೀವನ ಎದುರಿಗೆ  ಬಂದಾಗ ಕಾಮನಬಿಲ್ಲು  ಸಾರಿದೆ ಗೆಲುವಿನ ಬಣ್ಣ  *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

👸ಕೆಂಪು ಕೆನ್ನೆ ತುಂಟಿ 👸

ಕೆಂಪು ಕೆನ್ನೆ ತುಂಟಿ  ನೀನು ತುಂಬಾ ಬ್ಯೂಟಿ  ನಿನ್ನ ನಗುವ ಕಂಡ  ನನ್ನ ಮನವು ಕೆಂಡ  ಪ್ರೀತಿ ಅರಸಿ ಬಂದೆ  ಸೊಬಗ ನೋಡಿ ನಿಂದೆ  ಯಾಕೋ ನಿನದೆ ಧ್ಯಾನ  ಸಾಕು ಇನ್ನು ಮೌನ  ಮಾತು ತುಂಬಾ ಇಂಪು  ಕೇಳಿ ಹೃದಯ ತಂಪು  ನಡೆವ ನಡಿಗೆ ನವಿಲು  ನನಗೆ ಹೆಕೊ ಅಮಲು  ನಿನ್ನ ಕಣ್ಣ ಸನ್ನೆ  ಕಾಡುತಿದೆ ನನ್ನೇ  ನಿನ್ನ ಮಾತು ನೆನಪು  ಚೆಲುವೆಲ್ಲ ಹೊಳಪು  ಕೆಂಪು ಕೆನ್ನೆ ತುಂಟಿ ನೀನು ತುಂಬಾ ಬ್ಯೂಟಿ  ನೀನು ನಡೆವ ದಾರಿ  ಹಕ್ಕಿಯೊಂದು ಹಾರಿ  ಚಿಲಿಪಿಲಿ ಸದ್ದ ಸಾರಿ  ಹೇಳಿದೆ ನೀನು ತುಂಬಾ ಪ್ಯಾರಿ  ನೋಟದಲಿ ಬಾಣ  ಹಾರಿತು ಈ ರಾಮನ ಪ್ರಾಣ  ನಿನ್ನ ಬಲೆಗೆ ಬಿದ್ದ  ಹೃದಯವನ್ನು ಕದ್ದ  ಪ್ರೀತಿಯನ್ನು ಗೆದ್ದ  ಸೀತೆಯನ್ನೇ ಬಿಟ್ಟ  ನಿನ್ನ ಕನಸು ತೊಟ್ಟ  ಲಂಕೆಯನ್ನೇ ಸುಟ್ಟ  ಈ ನಿನ್ನ ರಾಮ ಪ್ರೀತಿಯಲಿ ಶ್ಯಾಮ  ಕೆಂಪು ಕೆನ್ನೆ ತುಂಟಿ ನೀನು ತುಂಬಾ ಬ್ಯೂಟಿ  ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್ 

💃🥀ಹೋ ಹುಡುಗಿ💃🥀

ನಿನ್ನ ಕಣ್ಣ ನೋಟದಿ  ಸೆರೆಯಾದೆ ನಾನು  ಮೋಹಕ ಮಾತಿಗೆ  ಬೆರೆಗಾದೆ ನಾನು  ಮನ ಬಿಚ್ಚಿ ಒಮ್ಮೆ  ಪ್ರೀತಿ ಹೇಳಲೇನು  ಹೋ ಹುಡುಗಿ  ಯಾಕೆ ಮೌನವಾದೆ ನೀನು  ನಿನ್ನ ಕಣ್ಣ ರೆಪ್ಪೆಯ ಕಾಡಿಗೆಯು ಕಪ್ಪು  ಆ ನಿನ್ನ ತುಟಿಗಳ ಬಣ್ಣ  ಸ್ವಲ್ಪ ಕೆಂಪು  ಗುಳಿ ಬಿದ್ದ  ಕೆನ್ನೆ  ಹಾಲಿನಂತೆ ಹೊಳಪು  ಬ್ರಹ್ಮನಿಗೂ ಅನಿಸಿದೆ ನಾ ಸೃಷ್ಟಿ ಮಾಡಿದೆ ತಪ್ಪು  ಹೋ ಹುಡುಗಿ ಒಮ್ಮೆ  ಮಾತನಾಡು ನೀನು  ಕಣ್ಣಲೇ ಚೂರಿ ಹಾಕಿ  ಕೊಲಬೇಡ ಇನ್ನು  ನಿನ್ನ ಕಂಡ ನನ್ನ ಮನಕೆ  ಪ್ರೀತಿಸುವೆ ಅಸೆ  ಮನದಲ್ಲಿ ಯಾಕೋ ಇಂದು  ಬೇಯುತಿದೆ ನೂರಾರು ಕನಸೇ  ಹೃದಯದಲಿ ಬಡಿಯುತಿದೆ  ನಿನ್ನ ಪ್ರೀತಿ ವಾದ್ಯ  ಕೇಳಿ ಹೇಗೆ ಸುಮ್ಮನಿರಲಿ  ಆ ಸಂಗೀತವನ್ನು ಸದ್ಯ  ದೇಹವೇಕೋ ಕುಣಿಯುತಿದೆ  ನಿನ್ನ ಹಾಡು ಕೇಳಿ  ಸಾಕು ಮಾಡು ಆಟವನ್ನು ನಿನ್ನ  ಪ್ರೀತಿ ಹೇಳಿ  ಹೋ ಹುಡುಗಿ  ಯಾಕೆ ಮೌನವಾದೆ ನೀನು  ಹಾಗೆ ಒಮ್ಮೆ ನಿನ್ನ ಬಾಚಿ ತಬ್ಬಿಕೊಳ್ಳಲೇನು  ********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್ 

⛪️🕌⛺️🎪ದೇವರ ನೆನಪು ⛪️🕌🎪⛺️

ಸಾವು ನೋವಿನ ಭಯದಲ್ಲಿ  ನೀ ಬೇಯುವೆ ಏಕಮ್ಮ  ಕಾಣದ ಆ ದೇವರ ನೆನಪಿನಲಿ  ಭಜನೆಯು ಏಕಮ್ಮ ಚಿಂತೆ ಎಂಬ ಸಂತೆಯಲಿ  ನೀ ಕೊರಗುವೆ ಏಕಮ್ಮ  ದೇವರು ಬಂದು ಎದುರಲ್ಲಿ  ನಿಂತರೆ ನೀ ಕೇಳುವೆ ಎನ್ನಮ್ಮ  ಸಾವನು ಬಲ್ಲವರು ಯಾರಿಹರು  ನೀ ತಿಳಿಸುವೆ ಏನಮ್ಮ  ಕಲ್ಲಿನ ದೇವರ ಮುಂದೆ  ನಿನ ಹರಕೆಯು ಏನಮ್ಮ  ದುಡ್ಡಿನ ಅಸೆ ಮೋಹದ ಕನಸು  ಹೊತ್ತು ಬಾಳುವರು ನನ್ನಮ್ಮ  ಹಸಿದ ಹೊಟ್ಟೆ ಹರಿದ ಬಟ್ಟೆ  ಕಂಡರೆ ನೂಕುವರು ಏಕಮ್ಮ  ಮನಸಿನ ಕಥೆ ನೋವಿನ ವ್ಯಥೇ  ಏನಿದು ಗೊಳ್ಳಮ್ಮ  ಎಲ್ಲವ ಅರಿತ ಮಾನವರು  ಸಾದಿಸುವರು ಏನಮ್ಮ  ನಾನು ನನ್ನದು ಎಂದು  ಮೆರೆದವರೆಲ್ಲ ಹೋದರು ಮರೆಯಾಗಿ  ಕಣ್ಣಾಮ್ಮ  ದ್ವೇಶದ ಜೀವನ ಸೇಡಿನ  ಮೈಮನ ಬಿಟ್ಟು ಬಾಳುವರೆನ್ನಮ್ಮ  ನಂಬಿಕೆ ದ್ರೋಹ ನಗುತಾ ಮೋಸ  ಮಾಡುತ ನಟಿಸುವರು ಯಾಕಮ್ಮ  ಏನೆ ಸಾದಿಸು ಬೇರೊಬ್ಬರ ನೋಯಿಸು  ಆರು ಮೂರಡಿ ಗುಂಡಿಯೇ  ಜೀವನದ ಕೊನೆಯಮ್ಮ  ಬಾಳಲಿ ಒಲವು ನೋವಲು ನಲಿವು,  ಮಮತೆಯ ಕರುಣೆ ಪ್ರೀತಿಯ ಬೆಳಕು  ತೋರಿದವರು ಉಳಿವರು ಸೇರುವರು  ದೇವರ ಪಾದವಮ್ಮ  ********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🍁ಚೆಲುವೊಂದು ನಗುತಿರಲು🍁

ಈ ರೂಪ ಅಪರೂಪ ಪ್ರೀತಿಯ ಸ್ವರೂಪ  ಚೆಲುವೊಂದು ನಗುತಿರಲು  ನೆನಪೊಂದು ಬಳಿಯಿರಲು  ಕೆನ್ನೆಯ ಸವರಿರಲು  ನಿನ್ನ ನೆನಪು ನನಗಾಯಿತು  ಮನಸಲ್ಲಿ ಮರೆಯಾಗಿ  ಕನಸೊಂದು ಸೊಗಸಾಗಿ  ಬಳಿ ಬಂದು ನನ ಕೂಗಿ  ಕಣ್ಣ ಮುಚ್ಚಿ ಕಣ್ಣ ಬಿಡಲು  ನೀ ನಿಂತೆ ಎದುರಾಗಿ  ನಿನ್ನ ಅಂದ ಮಕರಂದ  ನೀ ಮೂಡಿದ ಹೂವು ಚೆಂದ  ಕಿರುಗಣ್ಣ ನಿನ್ನ ನೋಟ  ಕಾಡುವ ತುಂಟಾಟ  ನಿನ ಮಾತು ಮೋಹಕ  ನಾ ನಿನೆಗೆ ಗ್ರಾಹಕ  ನಿಡುವೆಯ ರಸಪಾಕ  ದುಂಬಿಯು ನಾನಾಗಿ  ನಿನ ಒಲವಲ್ಲಿ ತೇಲೋಗಿ  ಬರುವೆಯಾ ಸನಿಹ  ಬರೆವೆನು ಪ್ರೀತಿಯ ಬರಹ  ********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

👬ಮೌನದ ಅಲೆ 👭

ಮರೆಯಾಯಿತೇ ಬದುಕು                  ಮೌನದ ಅಲೆಯಲಿ  ಸೆರೆಯಾಯಿತೇ ನಿನ್ನ ಬಿಂಬ                   ನನ್ನ ಕಣ್ಣ ಪುಟದಲಿ ಒಲವಾಯಿತೇ ನಿನಗೆ                    ನನ್ನ ಪ್ರೀತಿ ಕಡಲಲಿ ಕೈ ಇಡಿಯಲೇ ನಿನ್ನ ನಾನು                       ನನ್ನ  ಅರೆಮನೆಯಲಿ ಪ್ರೀತಿಯ ಪುಟದಲಿ                ಗೀಚಲೇ ನಿನ್ನ ಹೆಸರು ಸವಿಗನಸು ಕಾಣುವಾಗ                  ನೀನೇ ನನ್ನ ಉಸಿರು ಈ ಪಯಣದಿ ಸಾಗುವೆ             ನಿನ್ನಯ ಕನಸು ಹೊತ್ತು ಬರುವೆಯಾ ಜೊತೆಯಾಗಿ               ಮೌನದ ಸೆಲೆಯ ಕಿತ್ತು *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

🥀🌺ಮೋಹದ ಹೂವು🌺🥀

ನನ್ನ ಪ್ರೀತಿಯ ಹೂವೆ  ನಾ ನಡೆದ ದಾರಿ ಬರಿ ನೋವೇ  ಮನವು ಬಯಸಿತು ಒಲವು   ಸೋತ ಮನದ ಗೆಲುವು  ಆಸೆಗಳು ನೂರು ಮುಳ್ಳಾಗಿರಲು  ಕನಸುಗಳು ಚೂರಾಗಿರಲು  ಒಡೆದ ಕನ್ನಡಿಯಾಯಿತು  ನನ್ನ ಈ ಬದುಕು  ಪಾಳು ಬಿದ್ದ ಮನದ ಉಳುಕು  ಚೂರಾದ ಕನ್ನಡಿಯ  ನಾ ಬರೆದ ಮುನ್ನುಡಿಯ  ಸಾಲುಗಳಲಿಲ್ಲ ಹೊಳಪು  ಬಣ್ಣಿಸಲು ಆ ನಿನ್ನ ತಳುಕು  ನನ್ನ ಪ್ರೀತಿಯ ಹೂವೆ  ನಾ ನಡೆದ ದಾರಿ ಬರಿ ನೋವೇ  ಮುದುಡಿದ ಹೂವಿನ ಅಂದ  ವರ್ಣಿಸಲು ಏನೂ ಚೆಂದ  ಮುಪ್ಪಾದ ಮನಕೆ  ಸೋತು ಹೋದ ಬಯಕೆ  ತಿರಲಿಲ್ಲ ನಾ ಹೊತ್ತ ಅರಕೆ  ಕೊನೆಗೂ ತೀರದ ಬಯಕೆ  ನಸೋತೆ ನಿನ್ನ ಚಲಕೆ  ಸಾವಿಗೆ  ಮುನ್ನ ಆ ಹೂವು  ಸತ್ತ ದೇಹದ ಮೇಲಿನ ಹಾವು  ಮರೆಯಾಯಿತು ನೋವಿನ ದಾಹ  ಮರೆತು ಹೋಯಿತು ದ್ರೋಹ  ಮಣ್ಣಾದ ಮುದುಡಿದ ದೇಹ  ಕೊನೆಯಾಯಿತು ನೀ ಮೂಡಿದ  ಹೂವಿನ  ಮೋಹ  ನನ್ನ ಪ್ರೀತಿಯ ಹೂವೆ  ನಾ ನೆಡೆದ ದಾರಿ ಬರಿ ನೋವೇ  *******ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

⛈️☁️ಮಳೆ ಹನಿ ಬಿದ್ದಂತೆ⛈️☁️

ನೀ ಬಂದು ನೀನಂತಾಗ                   ಮಳೆ ಹನಿಯು ಬಿದ್ದಂತೆ  ನೀ ಇಲ್ಲದ ಘಳಿಗೆ                   ಭೂಮಿಯೇ ಬರದಂತೆ  ಒಲವಿಂದ ಬಳಿ ಬಂದೆ                   ನೀನಗಾಗಿ ನಾ ನಿಂತೆ  ನೀ ದೂರ ನಿಂತಿರಲು                   ಜೀವವೇ ಹೋದಂತೆ  ನನ್ನ ಕನಸಿನ ಅರಮನೆಗೆ                     ರಾಣಿಯು ನೀನಾದೆ  ನೀನಗಾಗಿ ನಾ  ಬರಲು                      ನಿಂತಲ್ಲೆ ಮಾಯಾದೆ ನೀನೊಂದು ಬಂಗಾರ                   ಆದಾಗ  ಸಿಂಗಾರ  ಕನ್ನಡಿಯು ನಾಚೈತಿ ನೋಡಿ                     ನಿನ್ನ  ಅಲಂಕಾರ   ನೀ ಬಂದು ನೀನಂತಾಗ                   ಮಳೆ ಹನಿಯು ಬಿದ್ದಂತೆ  ನೀ ಇಲ್ಲದ ಘಳಿಗೆ                    ಭೂಮಿಯೇ ಬರದಂತೆ  ಒಲವಿಂದ ಬಳಿ ಬಂದೆ                    ನೀನಗಾಗಿ ನಾ ನಿಂತೆ  ನೀ ದೂರ ನಿಂತಿರಲು                       ಜೀವವೇ ಹೋದಂತೆ  ನೀನೊಂದು  ವಧುವಾದೆ                  ನನ್ನ ಬಾಳ ಸತಿಯಾದೆ  ಸನೀಹಕೆ ನಾ ಬರಲು                   ನನ್ನಿಂದ  ದೂರದೇ  ಆ ನಿನ್ನ  ನಗುವು ಮೀಚಂತೆ                       ಬೂಮಿಗೆ ಮಳೆ ಹನಿಯು ಬಿದ್ದಂತೆ  ನೀ ಇಲ್ಲದ ಘಳಿಗೆ                          ಭೂಮಿಯೇ ಬರದಂತೆ  ಒಲವಿಂದ ಬಳಿ ಬಂದೆ                        ನೀನಗಾಗಿ ನಾ ನಿಂತೆ  ನೀ ದೂರ ನಿಂತಿರಲು                        ಜೀವವೇ ಹೋದಂತೆ  ********ರಚನೆ ****** ಡಾ. ಚಂದ್ರಶೇಖರ್ ಸಿ.ಹೆಚ್

🌸💮ಓ ನನ್ನ ಚೆಲುವೆ💮🌸

ಓ ನನ್ನ ಓಲವೇ  ನೀನು ಎಷ್ಟು ಚೆಲುವೆ ಮನಸ್ಸಲ್ಲಿ  ಮನೆ ಮಾಡಿ  ನನ್ನನ್ನು ನೀ ನೋಡಿ  ಕರೆದಂತೆ ನನಗಾಗಿ  ಚೆಲುವೆಲ್ಲ ಸೆರೆಯಾಗಿ  ಮರೆಯಾದೆ ನೀನು ಕೂಗಿದರೆ ನಾನು  ಈ ಬದುಕು ಬೇಸರ  ನಿನ ಪ್ರೀತಿ ಅವಸರ  ನಕ್ಕು ನೀ ಬಂದರೆ  ಬಾಳೆಲ್ಲಾ ಸುಂದರ  ಆಗಸದಿ ನಕ್ಷತ್ರ  ನಿನ ನೋಡಿ ನಕ್ಕಂತೆ  ನೀ ಬರುವ ಆದಿಯಲ್ಲಿ  ಮುಳ್ಳೆಲ್ಲ ಹೂವಂತೆ  ನಿನ ಕಣ್ಣು ಮಿನುಗುತಿದೆ ಮಿಂಚಿನ ನಕ್ಷತ್ರದಂತೆ  ನನಗೀಗ ಅನಿಸುತಿದೆ  ನೀ ಕೂಗಿದಂತೆ  ನೆಡೆಯುವ ದಾರಿಯು  ಹೂವಿಂದ ತುಂಬಿರಲು  ನಿನ್ನನ್ನು ನಾ ನೋಡಿ  ಪ್ರೀತಿಯಲ್ಲಿ ಬಳಿ ಬರಲು  ಹುಣ್ಣಿಮೆ ಚಂದ್ರನೇ  ಹಾಲಂತೆ ಬೆಳಗುವನು ನಮ್ಮನ್ನು ಅರಸುವನು  ಉಲ್ಕೆಗಳು ಬಿದ್ದಂತೆ  ನೀ ಇಲ್ಲದ ದಿನದಂತೆ  ಜೊತೆಯಲ್ಲಿ ನೀ ಇರಲು  ನಾ ಸ್ವರ್ಗವ ಕಂಡಂತೆ  ಬಾ ಬಾರೆ ಚೆಲುವೆ  ಓ ನನ್ನ ಓಲವೇ ನಿನಗ್ಯಾಕೆ ನನ್ನಲ್ಲಿ ಚಲವೇ *******ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್