🍁ಚೆಲುವೊಂದು ನಗುತಿರಲು🍁
ಈ ರೂಪ ಅಪರೂಪ
ಪ್ರೀತಿಯ ಸ್ವರೂಪ
ಚೆಲುವೊಂದು ನಗುತಿರಲು
ನೆನಪೊಂದು ಬಳಿಯಿರಲು
ಕೆನ್ನೆಯ ಸವರಿರಲು
ನಿನ್ನ ನೆನಪು ನನಗಾಯಿತು
ಮನಸಲ್ಲಿ ಮರೆಯಾಗಿ
ಕನಸೊಂದು ಸೊಗಸಾಗಿ
ಬಳಿ ಬಂದು ನನ ಕೂಗಿ
ಕಣ್ಣ ಮುಚ್ಚಿ ಕಣ್ಣ ಬಿಡಲು
ನೀ ನಿಂತೆ ಎದುರಾಗಿ
ನಿನ್ನ ಅಂದ ಮಕರಂದ
ನೀ ಮೂಡಿದ ಹೂವು ಚೆಂದ
ಕಿರುಗಣ್ಣ ನಿನ್ನ ನೋಟ
ಕಾಡುವ ತುಂಟಾಟ
ನಿನ ಮಾತು ಮೋಹಕ
ನಾ ನಿನೆಗೆ ಗ್ರಾಹಕ
ನಿಡುವೆಯ ರಸಪಾಕ
ದುಂಬಿಯು ನಾನಾಗಿ
ನಿನ ಒಲವಲ್ಲಿ ತೇಲೋಗಿ
ಬರುವೆಯಾ ಸನಿಹ
ಬರೆವೆನು ಪ್ರೀತಿಯ ಬರಹ
********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment