☘️☔️ಹಾ ಕ್ಷಣ ☔️☘️
ಮುಂಗಾರು ಮಳೆಯಾಗಿ
ಮರವೆಲ್ಲ ಹಸಿರಾಗಿ
ಕಾಡೆಲ್ಲಾ ಸೊಂಪಾಗಿ
ಗಾಳಿಯು ಜೋರಾಗಿ
ಬಿಸಿದಾ ಹಾಗಿದೆ ನನ್ನ ಈ ಮನ
ನಿನ್ನನ್ನು ನಾ ಕಂಡ ಹಾ ಕ್ಷಣಾ
ಪ್ರೀತಿಯು ಮೊಗ್ಗಾಗಿ
ಹಾ ಮೊಗ್ಗು ಹೂವಾಗಿ
ಜೇನೊಂದು ಮುತಿಟ್ಟು
ಮಕರಂದ ಹೀರಿದ
ಹಾಗಿದೆ ನನ್ನ ಈ ಮನ
ನಿನ್ನ ಮುಟ್ಟಿದ ಹಾ ಕ್ಷಣ
ಜೇನೊಂದು ಊಟಿ ಕಟ್ಟಿ
ಮಕರಂದ ಹರಿ ಬಿಟ್ಟಿ
ಸಿಹಿಯನ್ನು ಕೂಡಿಟ್ಟಿ
ರುಚಿ ನೋಡಲು ಕರೆದಂತಿದೆ
ನನ್ನ ಈ ಮನ
ನೀ ಸೋಕಿದ ಹಾ ಕ್ಷಣ
ಬಂದೆಯಾ ಊರಿಗೆ
ಬರುವೆಯಾ ನೀರಿಗೆ
ನೀರು ತುಂಬಿದ ಬಿಂದಿಗೆ
ನನಗೇಕೋ ಬಾಯಾರಿಕೆ
ಕುಡಿದಾಗ ನನ್ನ ಈ ಮನ
ನಿನ ಪ್ರೀತಿ ಸವಿದ ಹಾ ಕ್ಷಣ
ಮನಸಲಿ ಯಾತನೆ
ಯಾತಕೋ ವೇದನೆ
ನಿನಗಾಗಿ ರೋಧನೆ
ನೀನು ಇರದ ನನ್ನ ಈ ಮನ
ನೀ ಮರೆಯದಾ ಹಾ ಕ್ಷಣ
*********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment