👬ಮೌನದ ಅಲೆ 👭
ಮರೆಯಾಯಿತೇ ಬದುಕು
ಮೌನದ ಅಲೆಯಲಿ
ಸೆರೆಯಾಯಿತೇ ನಿನ್ನ ಬಿಂಬ
ನನ್ನ ಕಣ್ಣ ಪುಟದಲಿ
ಒಲವಾಯಿತೇ ನಿನಗೆ
ನನ್ನ ಪ್ರೀತಿ ಕಡಲಲಿ
ಕೈ ಇಡಿಯಲೇ ನಿನ್ನ ನಾನು
ನನ್ನ ಅರೆಮನೆಯಲಿ
ಪ್ರೀತಿಯ ಪುಟದಲಿ
ಗೀಚಲೇ ನಿನ್ನ ಹೆಸರು
ಸವಿಗನಸು ಕಾಣುವಾಗ
ನೀನೇ ನನ್ನ ಉಸಿರು
ಈ ಪಯಣದಿ ಸಾಗುವೆ
ನಿನ್ನಯ ಕನಸು ಹೊತ್ತು
ಬರುವೆಯಾ ಜೊತೆಯಾಗಿ
ಮೌನದ ಸೆಲೆಯ ಕಿತ್ತು
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment