⛱️🌈ಬದುಕಿನ ಬಣ್ಣ 🌈☔️


ಬದುಕಿನ ಬಣ್ಣ ಬಾಯ್ತೆರೆದಾಗ 

ಜೀವನಕೆಲ್ಲಿದೆ ಸೊಗಸು 

ಸುಡುವ ಬೆಂಕಿಗೆ ನೀರರೇದಾಗ

ಕೆಂಡದ ನನಸೊಂದು ಕನಸು 


ಮನಸಲಿ ಕೋಲಾಹಲದ

ಕೆಂಡ  ಸೃಷ್ಟಿಸಿದೆ ನನ್ನ ಈ ವಯಸ್ಸು 

ಅರಿಯುವ ಮುಂಚೆ ತಾಗಿದರೆ ಕೆಂಡ 

ಜೀವನವೇ ಸುಟ್ಟಂತ ಕನಸು


ಕಾಮನಬಿಲ್ಲಿನ ಬಣ್ಣವು

ನನ್ನಯ ಮನದ ದಿರಿಸು 

ಮೋಡವು ಮರೆಮಾಡಿ

ಸಿಡಿಲೊಂದು ಜೊತೆಗೂಡಿ 

ಮಳೆ ಹನಿಯು ಬೂಮಿಗೆ 

ಬಿದ್ದಂತೆ  ಸೊಗಸು 


ನಾ ನಡೆವ ದಾರಿಯು ಬೆಂಕಿಯು ಸುಟ್ಟಂತೆ 

ಮುಳ್ಳೊoದು  ನನ್ನೆದೆಯ ಚುಚ್ಚಿ 

ಇರಿದಂತೇ ಯಾಕಿ ನನಗಿ ಕನಸು 


ನೋವೊಂದು ಮನೆಮಾಡಿ 

ಮಂಜಲ್ಲಿ  ಕೆಂಡವು ಕರಗಿದಾಗಿದೆ 

ನೀ ಕೊಟ್ಟ ಒಲವಿನ ಬಣ್ಣ 

ನೀ ಮೂಡಿದ ಹೂವೊಂದು ಹೇಳಿದೆ 

ನಾನೀಗ ನೀರಲ್ಲಿ ಬೆಂದ ಸುಣ್ಣ 



ಯಾಕೀಗೆ ಯಾತನೆ

ಮನದಲ್ಲಿ ವೇದನೆ 

ನೀರಿಲ್ಲದ ಮರುಬೂಮಿಯ ರೋಧನೆ


ಬಂಜರು ನೆಲ್ಲದಲ್ಲಿ ಮುಂಗಾರು

ಮಳೆ ಹನಿ ಬಿದ್ದಂತೆ 

ನೀನಗಾಗಿ ನಾ ಕಾದು 

ಕೊನೆಯಾಗೋ ಜೀವಕೆ 

ಗುಟುಕೊಂದು ಸಿಕ್ಕಂತೆ


ಸುಡುವ ಬೇಸಿಗೆ ಕೊರೆವ ಚಳಿಗೆ 

ಮೈಮನ ಮಾಗಿದೆ 

ಬೆಂದ ಮನವು ನೊಂದ ಒಲವು 

ಕಥೆಯ ಹೇಳಿದೆ 


ಕೆಣಕುವ ವಯಸ್ಸು ಹದಿಹರೆಯದ ಕನಸು 

ಹೆಚ್ಚರವಿಲ್ಲದೆ ಹೋದರೆ 

ಬಾಳ್ಳೊoದು ಬೂದಿಯ ಬಣ್ಣ  

ಪ್ರೀತಿಯ ಜೀವನ ಎದುರಿಗೆ 

ಬಂದಾಗ ಕಾಮನಬಿಲ್ಲು

 ಸಾರಿದೆ ಗೆಲುವಿನ ಬಣ್ಣ 



*******ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35