👸ಕೆಂಪು ಕೆನ್ನೆ ತುಂಟಿ 👸
ಕೆಂಪು ಕೆನ್ನೆ ತುಂಟಿ
ನೀನು ತುಂಬಾ ಬ್ಯೂಟಿ
ನಿನ್ನ ನಗುವ ಕಂಡ
ನನ್ನ ಮನವು ಕೆಂಡ
ಪ್ರೀತಿ ಅರಸಿ ಬಂದೆ
ಸೊಬಗ ನೋಡಿ ನಿಂದೆ
ಯಾಕೋ ನಿನದೆ ಧ್ಯಾನ
ಸಾಕು ಇನ್ನು ಮೌನ
ಮಾತು ತುಂಬಾ ಇಂಪು
ಕೇಳಿ ಹೃದಯ ತಂಪು
ನಡೆವ ನಡಿಗೆ ನವಿಲು
ನನಗೆ ಹೆಕೊ ಅಮಲು
ನಿನ್ನ ಕಣ್ಣ ಸನ್ನೆ
ಕಾಡುತಿದೆ ನನ್ನೇ
ನಿನ್ನ ಮಾತು ನೆನಪು
ಚೆಲುವೆಲ್ಲ ಹೊಳಪು
ಕೆಂಪು ಕೆನ್ನೆ ತುಂಟಿ ನೀನು ತುಂಬಾ ಬ್ಯೂಟಿ
ನೀನು ನಡೆವ ದಾರಿ
ಹಕ್ಕಿಯೊಂದು ಹಾರಿ
ಚಿಲಿಪಿಲಿ ಸದ್ದ ಸಾರಿ
ಹೇಳಿದೆ ನೀನು ತುಂಬಾ ಪ್ಯಾರಿ
ನೋಟದಲಿ ಬಾಣ
ಹಾರಿತು ಈ ರಾಮನ ಪ್ರಾಣ
ನಿನ್ನ ಬಲೆಗೆ ಬಿದ್ದ
ಹೃದಯವನ್ನು ಕದ್ದ
ಪ್ರೀತಿಯನ್ನು ಗೆದ್ದ
ಸೀತೆಯನ್ನೇ ಬಿಟ್ಟ
ನಿನ್ನ ಕನಸು ತೊಟ್ಟ
ಲಂಕೆಯನ್ನೇ ಸುಟ್ಟ
ಈ ನಿನ್ನ ರಾಮ ಪ್ರೀತಿಯಲಿ ಶ್ಯಾಮ
ಕೆಂಪು ಕೆನ್ನೆ ತುಂಟಿ ನೀನು ತುಂಬಾ ಬ್ಯೂಟಿ
********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment