🥀🌺ಮೋಹದ ಹೂವು🌺🥀
ನನ್ನ ಪ್ರೀತಿಯ ಹೂವೆ
ನಾ ನಡೆದ ದಾರಿ ಬರಿ ನೋವೇ
ಮನವು ಬಯಸಿತು ಒಲವು
ಸೋತ ಮನದ ಗೆಲುವು
ಆಸೆಗಳು ನೂರು ಮುಳ್ಳಾಗಿರಲು
ಕನಸುಗಳು ಚೂರಾಗಿರಲು
ಒಡೆದ ಕನ್ನಡಿಯಾಯಿತು
ನನ್ನ ಈ ಬದುಕು
ಪಾಳು ಬಿದ್ದ ಮನದ ಉಳುಕು
ಚೂರಾದ ಕನ್ನಡಿಯ
ನಾ ಬರೆದ ಮುನ್ನುಡಿಯ
ಸಾಲುಗಳಲಿಲ್ಲ ಹೊಳಪು
ಬಣ್ಣಿಸಲು ಆ ನಿನ್ನ ತಳುಕು
ನನ್ನ ಪ್ರೀತಿಯ ಹೂವೆ
ನಾ ನಡೆದ ದಾರಿ ಬರಿ ನೋವೇ
ಮುದುಡಿದ ಹೂವಿನ ಅಂದ
ವರ್ಣಿಸಲು ಏನೂ ಚೆಂದ
ಮುಪ್ಪಾದ ಮನಕೆ
ಸೋತು ಹೋದ ಬಯಕೆ
ತಿರಲಿಲ್ಲ ನಾ ಹೊತ್ತ ಅರಕೆ
ಕೊನೆಗೂ ತೀರದ ಬಯಕೆ
ನಸೋತೆ ನಿನ್ನ ಚಲಕೆ
ಸಾವಿಗೆ ಮುನ್ನ ಆ ಹೂವು
ಸತ್ತ ದೇಹದ ಮೇಲಿನ ಹಾವು
ಮರೆಯಾಯಿತು ನೋವಿನ ದಾಹ
ಮರೆತು ಹೋಯಿತು ದ್ರೋಹ
ಮಣ್ಣಾದ ಮುದುಡಿದ ದೇಹ
ಕೊನೆಯಾಯಿತು ನೀ ಮೂಡಿದ
ಹೂವಿನ ಮೋಹ
ನನ್ನ ಪ್ರೀತಿಯ ಹೂವೆ
ನಾ ನೆಡೆದ ದಾರಿ ಬರಿ ನೋವೇ
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment