💃🥀ಹೋ ಹುಡುಗಿ💃🥀


ನಿನ್ನ ಕಣ್ಣ ನೋಟದಿ 

ಸೆರೆಯಾದೆ ನಾನು 

ಮೋಹಕ ಮಾತಿಗೆ 

ಬೆರೆಗಾದೆ ನಾನು 

ಮನ ಬಿಚ್ಚಿ ಒಮ್ಮೆ 

ಪ್ರೀತಿ ಹೇಳಲೇನು 


ಹೋ ಹುಡುಗಿ  ಯಾಕೆ ಮೌನವಾದೆ ನೀನು 


ನಿನ್ನ ಕಣ್ಣ ರೆಪ್ಪೆಯ

ಕಾಡಿಗೆಯು ಕಪ್ಪು 

ಆ ನಿನ್ನ ತುಟಿಗಳ ಬಣ್ಣ 

ಸ್ವಲ್ಪ ಕೆಂಪು 

ಗುಳಿ ಬಿದ್ದ  ಕೆನ್ನೆ 

ಹಾಲಿನಂತೆ ಹೊಳಪು 

ಬ್ರಹ್ಮನಿಗೂ ಅನಿಸಿದೆ ನಾ ಸೃಷ್ಟಿ ಮಾಡಿದೆ ತಪ್ಪು 


ಹೋ ಹುಡುಗಿ ಒಮ್ಮೆ

 ಮಾತನಾಡು ನೀನು 

ಕಣ್ಣಲೇ ಚೂರಿ ಹಾಕಿ

 ಕೊಲಬೇಡ ಇನ್ನು 


ನಿನ್ನ ಕಂಡ ನನ್ನ ಮನಕೆ 

ಪ್ರೀತಿಸುವೆ ಅಸೆ 

ಮನದಲ್ಲಿ ಯಾಕೋ ಇಂದು 

ಬೇಯುತಿದೆ ನೂರಾರು ಕನಸೇ 


ಹೃದಯದಲಿ ಬಡಿಯುತಿದೆ 

ನಿನ್ನ ಪ್ರೀತಿ ವಾದ್ಯ 

ಕೇಳಿ ಹೇಗೆ ಸುಮ್ಮನಿರಲಿ 

ಆ ಸಂಗೀತವನ್ನು ಸದ್ಯ 


ದೇಹವೇಕೋ ಕುಣಿಯುತಿದೆ 

ನಿನ್ನ ಹಾಡು ಕೇಳಿ 

ಸಾಕು ಮಾಡು ಆಟವನ್ನು ನಿನ್ನ 

ಪ್ರೀತಿ ಹೇಳಿ 


ಹೋ ಹುಡುಗಿ  ಯಾಕೆ ಮೌನವಾದೆ ನೀನು 

ಹಾಗೆ ಒಮ್ಮೆ ನಿನ್ನ ಬಾಚಿ ತಬ್ಬಿಕೊಳ್ಳಲೇನು 



********ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35