⛪️🕌⛺️🎪ದೇವರ ನೆನಪು ⛪️🕌🎪⛺️
ಸಾವು ನೋವಿನ ಭಯದಲ್ಲಿ
ನೀ ಬೇಯುವೆ ಏಕಮ್ಮ
ಕಾಣದ ಆ ದೇವರ ನೆನಪಿನಲಿ
ಭಜನೆಯು ಏಕಮ್ಮ
ಚಿಂತೆ ಎಂಬ ಸಂತೆಯಲಿ
ನೀ ಕೊರಗುವೆ ಏಕಮ್ಮ
ದೇವರು ಬಂದು ಎದುರಲ್ಲಿ
ನಿಂತರೆ ನೀ ಕೇಳುವೆ ಎನ್ನಮ್ಮ
ಸಾವನು ಬಲ್ಲವರು ಯಾರಿಹರು
ನೀ ತಿಳಿಸುವೆ ಏನಮ್ಮ
ಕಲ್ಲಿನ ದೇವರ ಮುಂದೆ
ನಿನ ಹರಕೆಯು ಏನಮ್ಮ
ದುಡ್ಡಿನ ಅಸೆ ಮೋಹದ ಕನಸು
ಹೊತ್ತು ಬಾಳುವರು ನನ್ನಮ್ಮ
ಹಸಿದ ಹೊಟ್ಟೆ ಹರಿದ ಬಟ್ಟೆ
ಕಂಡರೆ ನೂಕುವರು ಏಕಮ್ಮ
ಮನಸಿನ ಕಥೆ ನೋವಿನ ವ್ಯಥೇ
ಏನಿದು ಗೊಳ್ಳಮ್ಮ
ಎಲ್ಲವ ಅರಿತ ಮಾನವರು
ಸಾದಿಸುವರು ಏನಮ್ಮ
ನಾನು ನನ್ನದು ಎಂದು
ಮೆರೆದವರೆಲ್ಲ ಹೋದರು ಮರೆಯಾಗಿ
ಕಣ್ಣಾಮ್ಮ
ದ್ವೇಶದ ಜೀವನ ಸೇಡಿನ
ಮೈಮನ ಬಿಟ್ಟು ಬಾಳುವರೆನ್ನಮ್ಮ
ನಂಬಿಕೆ ದ್ರೋಹ ನಗುತಾ ಮೋಸ
ಮಾಡುತ ನಟಿಸುವರು ಯಾಕಮ್ಮ
ಏನೆ ಸಾದಿಸು ಬೇರೊಬ್ಬರ ನೋಯಿಸು
ಆರು ಮೂರಡಿ ಗುಂಡಿಯೇ
ಜೀವನದ ಕೊನೆಯಮ್ಮ
ಬಾಳಲಿ ಒಲವು ನೋವಲು ನಲಿವು,
ಮಮತೆಯ ಕರುಣೆ ಪ್ರೀತಿಯ ಬೆಳಕು
ತೋರಿದವರು ಉಳಿವರು ಸೇರುವರು
ದೇವರ ಪಾದವಮ್ಮ
********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment