🏍️🏍️ ನಮ್ಮ ಸಾವರಿ 🏍️🏍️


ದಾರಿಯಲ್ಲಿ ಬೈಕು ಹೇರಿ 

ಹೊರಟಿತು ನಮ್ಮ ಸಾವರಿ 

ಅಕ್ಕ ಪಕ್ಕ  ಮರದ ಸಾಲು 

ಕೈ ಬಿಸಿ ಕರೆದ ಹೊನಲು 


ತಂಗಾಳಿಯಲಿ ನಾವು ತೇಲಿ 

ತೂಗಿದಂತೆ ಬೈಕ್ ಗಾಲಿ 

ಕ್ರಮಿಸಿದೆವು ತುಂಬಾ ದೂರ 

ಮರೆತು ನಮ್ಮ ನೋವ ಭಾರ  


ಲಕ್ಕವಳ್ಳಿ ಡ್ಯಾಮ್ ಬಂತು 

ನೀರು ಹಾಲಿನಂತೆ ಸುರಿಯುತಿತ್ತು 

ನೋಡಲೆಷ್ಟು ಚೆಂದ 

ತುಂಬಿದ ಡ್ಯಾಮ್ ಅಂದ 


ಮತ್ತೆ ಹೊರಟ ನಮ್ಮ ಪಯಣ 

ಆಗುಂಬೆಯ ಸೂರ್ಯನ ಸ್ವರ್ಣ 

ಘಾಟಿಯಲ್ಲಿ ರಸ್ತೆ ತಿರುವು 

ಖುಷಿಗೆ ಲಗ್ಗೆ ಇಟ್ಟ ಒಲವು 


ಬೆಟ್ಟದ ಕೆಳಗಿನ ಊರು 

ಕೃಷ್ಣನಾ ತವರೂರು 

ದರ್ಶನ್ ಪಡೆದ ಮನ 

ಹೇಳಿತು  ಉಡುಪಿ ಕೃಷನಿಗೆ ನಮನ 


ಸಮುದ್ರದ ಕಡಲ ತೀರ 

ಮರಳಿನಲ್ಲಿ ರಚಿಸಿದ ತೇರಾ 

ಅಲೆ ಬಂತು ರಭಸದಲ್ಲಿ 

ಕೊಚ್ಚ್ಚಿ ಹೋಯಿತು ಗೋಪುರ 


ಮನಸ್ಸು ಏಕೋ ತುಂಬಾ ಶಾಂತ 

ಪ್ರೀತಿಸಿದ ಹುಡುಗಿ ಕಾಂತಾ 

ಸುತ್ತುತ ಊರು ಊರು 

ಸಾಗಿತು ನಮ್ಮ ಒಲವ ತೇರು 


********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35