🌸💮ಓ ನನ್ನ ಚೆಲುವೆ💮🌸
ಓ ನನ್ನ ಓಲವೇ
ನೀನು ಎಷ್ಟು ಚೆಲುವೆ
ಮನಸ್ಸಲ್ಲಿ ಮನೆ ಮಾಡಿ
ನನ್ನನ್ನು ನೀ ನೋಡಿ
ಕರೆದಂತೆ ನನಗಾಗಿ
ಚೆಲುವೆಲ್ಲ ಸೆರೆಯಾಗಿ
ಮರೆಯಾದೆ ನೀನು ಕೂಗಿದರೆ ನಾನು
ಈ ಬದುಕು ಬೇಸರ
ನಿನ ಪ್ರೀತಿ ಅವಸರ
ನಕ್ಕು ನೀ ಬಂದರೆ
ಬಾಳೆಲ್ಲಾ ಸುಂದರ
ಆಗಸದಿ ನಕ್ಷತ್ರ
ನಿನ ನೋಡಿ ನಕ್ಕಂತೆ
ನೀ ಬರುವ ಆದಿಯಲ್ಲಿ
ಮುಳ್ಳೆಲ್ಲ ಹೂವಂತೆ
ನಿನ ಕಣ್ಣು ಮಿನುಗುತಿದೆ
ಮಿಂಚಿನ ನಕ್ಷತ್ರದಂತೆ
ನನಗೀಗ ಅನಿಸುತಿದೆ
ನೀ ಕೂಗಿದಂತೆ
ನೆಡೆಯುವ ದಾರಿಯು
ಹೂವಿಂದ ತುಂಬಿರಲು
ನಿನ್ನನ್ನು ನಾ ನೋಡಿ
ಪ್ರೀತಿಯಲ್ಲಿ ಬಳಿ ಬರಲು
ಹುಣ್ಣಿಮೆ ಚಂದ್ರನೇ
ಹಾಲಂತೆ ಬೆಳಗುವನು
ನಮ್ಮನ್ನು ಅರಸುವನು
ಉಲ್ಕೆಗಳು ಬಿದ್ದಂತೆ
ನೀ ಇಲ್ಲದ ದಿನದಂತೆ
ಜೊತೆಯಲ್ಲಿ ನೀ ಇರಲು
ನಾ ಸ್ವರ್ಗವ ಕಂಡಂತೆ
ಬಾ ಬಾರೆ ಚೆಲುವೆ
ಓ ನನ್ನ ಓಲವೇ
ನಿನಗ್ಯಾಕೆ ನನ್ನಲ್ಲಿ ಚಲವೇ
*******ರಚನೆ *****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment