📌📍ಮುಳ್ಳಾಗಿದೆ ಮನಸ್ಸು 📌📍


ಮುಳ್ಳಾಗಿದೆ ಮನಸ್ಸು ಕಣ್ಣಿರಲಿ 

ಕನಸಾಗಿದೆ ನನಗೆ ನಿನ್ನ  

ಪ್ರೇಮದ ಬಲೆಯಲ್ಲಿ 


ಒಲವಾಗಿದೆ ನಿನ್ನ ಹಟದಲ್ಲಿ 

ಸೆರೆಯಾಗುವೆ ನಾನು ನಿನ್ನ  ನೋಟದಲಿ 


ಮಗುವಾಗುವೆ ನಾನು 

 ನಿನ್ನ  ಪ್ರೀತಿ ಕಡಲಲಿ 

ಪ್ರೀತಿಸುವೆ ನಿನ್ನ ನಾನು 

ಪ್ರೀತಿಯ ನಲಿವಲಿ 


ಸಾಕುವೆ ನಿನ್ನ ನಾನು ಅಂಗೈಲಿ 

ಕೊಡುವೆಯ ಪ್ರೀತಿಯನು 

ನಿನ್ನ ಪುಟ್ಟ ಹೃದಯದಲಿ 


ನಿನ್ನ ನಗುವೇ ನನ್ನ ಕನಸು 

ಪ್ರೀತಿಯಲಿ ಎಳು ಬಿಚ್ಚಿ ಮನಸು 


ಪೂರೈಸುವೆ ನಾನು ನಿನ್ನ ಕನಸ್ಸು

ಸೊಗಸಲ್ಲವೇ ಈ ಪ್ರೀತಿಯ ವಯಸ್ಸು 


ನಗುತಾ ನಲಿವ ನಾವು 

ಸವಿಯುತ ಜೀವನದ ನನಸ್ಸು


*******ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್ 




Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20