ಸ್ಮಶಾನದ ಹೆಣ
ದ್ವೇಷದ ಜ್ವಾಲೆಯ ಕಿಡಿ ಹೊತ್ತಿ ಉರಿದಿದೆ ಹಸಿದ ಮನವೊಂದು ನೆತ್ತರು ಕುಡಿದಿದೆ ಸ್ಮಶಾನದ ಹೆಣವೊಂದು ಬಾಯಿ ಬಿಟ್ಟಿದೆ ಸುಡುಗಾಡಿನಲಿ ಗೂಬೆ ಶಕುನ ನುಡಿದಿದೆ ಕಾಣದ ಕೈಯೊಂದು ಪಾಪದ ಕೆಲಸ ಮಾಡಿದೆ ಕುಂಟುವ ನೆನಪೊಂದು ಸುಳ್ಳು ನೆಪವ ಹೇಳಿದೆ ಯಾರು ಬರೆದರು ವಿಧಿಯ ನಿಜವ ತಿಳಿಯದೆ ಅತ್ತು ಕರೆದರು ಹೋದ ಜೀವ ಮತ್ತೇ ಬಾರದೆ ಬ್ರಹ್ಮ ನೀನು ಮಾಡಿದೆ ಕೊಲೆಯ ಪಾಪ ಬರೆದ ಪದವು ಸುಡುತ್ತಾ ತೋರಿದೆ ಕೋಪ ಅಕ್ಷರಗಳು ತೋರಿವೆ ದುಃಖದಿ ನರಕದ ಹಾದಿ ಯಾರು ಕಾಯಬೇಕು ಹೇಳು ಕಾಲದ ಬೇಧಿ ಮಸಣದ ಊರಲಿ ಏಕೋ ಮೌನದ ಛಾಯೆ ಕಾಡಿದೆ ಬಿಡದೆ ನಮ್ಮ ಸೂತಕದ ಮಾಯೆ ಹೆಣದ ಮುಂದೆ ಬೆಳಕಿನ ದೀಪವ ಹಚ್ಚಿಹರು ಕತ್ತಲೆ ಓಡಿಸಲು ಮೋಸದ ಪಣವ ತೊಟ್ಟಿಹರು **********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ