ಬಾಡಿದ ಬಾಳು
ಬಾಡಿದ ಹೂವುಗಳು ನಗುವುದ ಮರೆತಿವೆ
ಚಿಗುರಿದ ಕನಸುಗಳು ಮನದಲೇ ಸತ್ತಿವೆ
ಬದುಕಿನ ಬಂಡಿಯು ಕುಂಟುತ ಸಾಗಿದೆ
ನೆನ್ನೆಯ ನೆನಪನು ಮೆಲುಕು ಹಾಕಿದೆ
ಜೀವನದಿ ನೂಕಬೇಕು ಗಂಡ ಗುಂಡಿ
ಬಾಳು ಈಡೇರೆದ ಆಸೆಗಳ ಹುಂಡಿ
ಸಾಗಿದೆ ನಡೆವ ದಾರಿ ದೂರ ಪಯಣದೀ
ಎಲ್ಲಿ ತಲುಪುವುದು ಬಾಳಲಿ ಇಟ್ಟ ಗುರಿ
ಸುಮ್ಮನೆ ಸುಡುವುದು ಚಿಂತೆಯ ಚಿತೆಯು
ಕಾಡುತ ಸಾಗಿದೆ ನೆನ್ನೆಗಳ ವ್ಯಥೆಯು
ಮೂರು ದಿವಸದ ಬಾಳು ಯಾರಿಗೆ ಯಾರು ಇಲ್ಲ
ಸಾವಿನ ನಿಜ ಗುಟ್ಟು ತಿಳಿದವರು ಇಲ್ಲಿ ಇಲ್ಲ
********ರಚನೆ********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment