ಸುಟ್ಟಿದೆ ನೆತ್ತರು
ಎದೆಯ ಒಳಗೆ ಹತ್ತಿದ ಬೆಂಕಿಗೆ
ನೀರು ಎರೆಯುವರು ಯಾರಾಮ್ಮ
ಮನದ ಒಳಗೆ ಸುಡುವ ವಿಷವ
ಹೊರತೆಗೆಯುವುದು ಎಗಮ್ಮ
ಸೂರ್ಯನ ಕಿರಣ ಬೆಳಕಿನ ಬೆಂಕಿ
ಹಚ್ಚಿಹುದು ಮನು ಕುಲಕೆ
ಸಿಡಿಲಿಗೆ ಬಂದ ಮಳೆಯೂ
ತಣ್ಣನೆ ನಡುಗಿಸಿದೆ ಈ ಜಗಕೆ
ಮೋಸದ ಅಲೆಯು ಬಲಿ ಪಡೆದಿದೆ
ಸಮುದ್ರದ ದಡದ ಬುಡವ
ಸಿಹಿ ನೀರಿನ ಸೆಲೆಯು ತಣಿಸಿದೆ
ಬತ್ತಿ ಬಾಯಾರಿದ ಮುದಿ ದಣಿವ
ಆಸೆಗಳು ಅರ್ಬಟಿಸಿವೆ ನರ
ಮನುಷ್ಯನ ಸುಡೊ ಮನವ
ಎಚ್ಚರಿಸಿವೆ ಅರಿಷಡ್ವರ್ಗಗಳು
ಚಿಗುರುತ ಬೀಜದ ಹುಸಿ ಪಲವ
ಕಾಯುವ ದೇವರಿಗೆ ಗುರಿ
ಇಟ್ಟು ಮಾಡಿಸಿದರು ಮಾಟ
ರಾಕ್ಷಸರು ಮೆರೆದರು ಕುಡಿದು
ನೆತ್ತರಿನ ಹಸಿ ಖುಷಿ ಊಟ
ಹಣೆಬರಹ ಬರೆದವನಿಗೆ ಇಡಬೇಕು
ಯಾರು ನೋವಿನ ಶಾಪ
ವಿಧಿಯ ಆಟಕೆ ನಲುಗಿ ಭೂಮಂಡಲ
ಏಕೋ ನಡುಗಿಸುವ ಬಿಸಿ ಕೋಪ
*********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment