ಮಕ್ಕಳ ಗೀತೆ -54
ಮುದ್ದು ಬಂಗಾರಿ*
ನನ್ನ ಮುದ್ದು ಬಂಗಾರಿ
ಊದುವೇ ನಾನು ತುತ್ತೂರಿ
ನನ್ನ ಮಗಳು ಕಸ್ತೂರಿ
ಇವಳು ತುಂಬಾ ಹಟಮಾರಿ
ತಿನ್ನಲು ಅತ್ತು ಕರೆದಿಹಳು
ಏಕೋ ರಂಪ ಮಾಡಿಹಳು
ಒದೆಯನ್ನು ಏಕೋ ತಿಂದಿಹಳು
ಕಣ್ಣೀರು ಹಾಕುತ್ತ ಕುಳಿತಿಹಳು
ಅಮ್ಮ ಗುಮ್ಮ ತೋರಿಹಳು
ಬಾಯಿಗೆ ಅನ್ನ ತುರುಕಿಹಳು
ಚಿನ್ನಾರಿ ಜಗಿದು ಉಗಿದಿಹಳು
ಅಮ್ಮ ಎಂದು ಕರೆದಿಹಳು
ಇವಳು ತುಂಬಾ ಹೆಮ್ಮಾರಿ
ನನ್ನ ಮುದ್ದು ವಯ್ಯಾರಿ
ನೋಡಲು ಮಾತ್ರ ಸಿಂಗಾರಿ
ಇವಳೇ ನನ್ನ ಸಿಂಧೂರಿ
ನೋಡಲು ಇವಳ ಬಿಂಕ
ನಾನು ಕಟ್ಟಬೇಕು ಸುಂಕ
ನುಡಿಸಬೇಕು ಇವಳಿಗೆ ಡಂಕ
ನಾನು ತಾನೇ ಮನೇಲಿಮಂಕ
ನನ್ನ ಮುದ್ದು ಬಂಗಾರಿ
ಊದುವೇ ನಾನು ತುತ್ತೂರಿ
ನನ್ನ ಮಗಳು ಕಸ್ತೂರಿ
ಇವಳು ತುಂಬಾ ಹಟಮಾರಿ
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment