ಮಕ್ಕಳ ಗೀತೆ -52 -ಆಳುವ ಪುಟ್ಟಿ -ಕನ್ನಡದಲ್ಲಿ





ಅಳುವ ಪುಟ್ಟಿ

ಬೀದಿಯಲ್ಲಿ ನಾಯಿಯೊಂದು ಸುಮ್ಮನೆ ಮಲಗಿತ್ತು

ಮನೆಯ ಮುಂದೆ ನಮ್ಮ ಪುಟ್ಟಿ   ಕೂತು ಅಳುತ್ತಿತ್ತು 

ಶಬ್ದ ಕೇಳಿ ನಾಯಿಯು  ಬೌ ಬೌ ಎಂದಿತ್ತು 

ನಮ್ಮ ಪುಟ್ಟಿ ಚೀರಿಕೊಂಡು ಮನೆ ಒಳಗೆ ಓಡಿತ್ತು 


ಮನೆಯಲ್ಲೊಂದು  ಮಿಯಾವ್ ಬೆಕ್ಕು ಮಲಗಿತ್ತು 

ನಮ್ಮ ಪುಟ್ಟಿ ಬೆಕ್ಕಿನ ಬಾಲವ ತುಳಿದಿತ್ತು 

ಬೆಕ್ಕು ಪುಟ್ಟಿಯ ಮೇಲೆ ಹೆಗರಿ ಬಂದಿತ್ತು 

ಅಮ್ಮ ಗದರಿದಾಗ ಬೆಕ್ಕು ನಿಂತುಕೊಂಡಿತ್ತು 


ಮನೆಯ ಹಿಂದೆ ದೊಡ್ಡಿಯಲಿ ಹಸುವು ಮಲಗಿತ್ತು 

ನಮ್ಮ ಪುಟ್ಟಿ ಹಸುವ ಮುದ್ದು ಮಾಡಿತ್ತು 

ಹಸುವು ಕೊಂಬಿನಿಂದ ಪುಟ್ಟಿಯ ತಿವಿದಿತ್ತು 

ಪುಟ್ಟಿಗೆ ಸಣ್ಣ ಪುಟ್ಟ ಗಾಯ ಆಗಿತ್ತು 


ನಮ್ಮ ಪುಟ್ಟಿ ಮನೆಯ ಒಳಗೆ ಆಟ ಆಡಿತ್ತು

ಅಮ್ಮ ಒಲೆಯಾ ಮೇಲೆ ಅನ್ನ ಬೇಯಿಸಿತ್ತು 

ಪುಟ್ಟಿ ಪಾತ್ರೆಯಲ್ಲಿ ಹಾಲು ಎಂದು ಮುಟ್ಟಿ ಕೈಯ ಸುಟ್ಟಿತು 

ಗಾಯ ನೋಡಿ ಅಮ್ಮನ ಎದೆಗೆ ಗಾಸಿಯಾಗಿತ್ತು

*************ರಚನೆ *************

 ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ