ಮಕ್ಕಳ ಗೀತೆ-52

 



🌹ನನ್ನಮ್ಮ🌹

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು 

ನಡೆದಳು ನನ್ನ ಕಂದಮ್ಮ 

ದಾರಿಯಲ್ಲಿ ಕಲ್ಲು ಮುಳ್ಳು 

ಚುಚ್ಚುತ್ತವೆ ನನ್ನಮ್ಮ 


ಓಡುತ್ತ  ಮುಂದೆ ಸಾಗುವೆ 

ಅಕ್ಕ ಪಕ್ಕ ನೋಡುವೆ 

ಹಸು ಅಂಬಾ ಕೂಗಿಹುದು 

ನಿನ್ನ ಕಣ್ಣು ಅರಳಿಹುದು 


ಬೆಕ್ಕು ಬಂತು ನಿನ್ನ ನೋಡಿ 

ಮಿಯಾವ್ ಮಿಯಾವ್ ಕೂಗಿ 

ನಾಯಿ ಬಂತು ನಿನ್ನ ಬಳಿಗೆ 

ಬೌ ಬೌ ಅಂತೂ ನಿನ್ನ ಕರೆಗೆ 


ಅಕ್ಕ ಕರೆದಿಹಳು ನಿನಗೆ ಗುಮ್ಮ 

ಹಾಲುನು ತಂದಿಹಳು ಅಮ್ಮ 

ಕುಡಿಯಲು ಹಠವೇಕೆ ನಿನಗೆ

ಕುಡಿ ಜಾಣೆ ಹಾಲನು ಸುಮ್ಮನೆ 


ನೀನು ತುಂಬಾ ಜಾಣೆ ತಾನೆ                  

  ಇದು ಅಮ್ಮನ ಅಡುಗೆ ಕೋಣೆ 

ಅಮ್ಮ ಅಡುಗೆ ಮಾಡಲು ಬಿಡು 

ನೀನು ಸುಮ್ಮನೆ ಆಟ ಆಡು 


*********ರಚನೆ********

ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ