ಕದನ ಮಾಡಿದೆ
ಮನದ ಒಳಗೆ ನಿನ್ನ ನೆನಪು
ಕದನ ಮಾಡಿದೆ
ಆಸೆಯೊಂದು ಬಳಿಗೆ ಬಂದು
ಸೋತು ಕೂತಿದೆ
ಕಣ್ಣ ಹನಿ ನೀರು ದುಮ್ಮಿಕ್ಕಿ
ಬಿಡದೆ ಸುರಿದಿದೆ
ಭಾವವೊಂದು ಎದೆಯ ಕದವ
ತೆರೆದು ನಿಂತಿದೆ
ಪಾಳು ಬಿದ್ದ ಗುಡಿಯಲ್ಲಿ
ಪೂಜೆ ನಡೆವುದೇ
ಹಾಳು ಹೃದಯವೇಕೊ ಬಿಡದೆ
ತಾಳ ಬಡಿದಿದೆ
ಸೋತು ಮಲಗಿದ ಕನಸು
ಸುಮ್ಮನೆ ಸತ್ತಿದೆ
ಸೃಷ್ಟಿಸಿದ ದೇವನಿಗೆ ಕರುಣೆ
ಏಕೋ ಬಾರದೆ
ವಿಧಿಯ ಆಟ ಸಾವ ನೋಟ
ಕೂಗಿ ಕರೆದಿದೆ
ದೇಹದ ಹುಣ್ಣಾಗಿ ಮನಸ್ಸು
ಹಣ್ಣಾಗಿ ನಿಂತಿದೆ
ಮುದುಡಿದ ಬಯಕೆ ಬೆಂದು
ಸುಡುತ್ತಿದೆ
ಮೂಕ ಮನಸ್ಸು ಭಾವವಾಗಿ
ಹಾಡು ಹಾಡಿದೆ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment