ಹೂವು ಅರಳಿತ್ತು
ಬಾನಿನಲ್ಲಿ ಹೂವ್ವೊಂದು ಅರಳಿತ್ತು
ಹೂವ ನೋಡಿ ಸೂರ್ಯನು ನಕ್ಕಿತ್ತು
ನಾಚಿದ ಹೂವು ಸೂರ್ಯನಿಗೆ ಲೈನ್ ಕೊಟ್ಟಿತ್ತು
ಬೆಳಕಿಗೆ ಮೈಮನವೆಲ್ಲ ಕೆರಳಿ ನಿಂತಿತ್ತು
ಹೂವಿನ ಮೈಮನವೆಲ್ಲ ಚೆಲುವಲಿ ತುಂಬಿತ್ತು
ಆಸೆಯ ತವಕ ಹೂವು ಪರಿಮಳ ಸುಸಿತ್ತು
ದುಂಬಿಯು ಬಂದು ಹೂವಿಗೆ ಮುತ್ತನಿಟ್ಟಿತ್ತು
ಮುತ್ತಿನ ಮಕರಂದದಿ ದುಂಬಿಯು ತೇಲಿತ್ತು
ಹಗಲಿನಲ್ಲಿ ಬೆಳಕಿಟ್ಟ ಸೂರ್ಯ ಸಂಜೆ ಮುಳುಗಿತ್ತು
ರಾತ್ರಿಯ ತಂಗಾಳಿಯಲಿ ಭಾನು ನಗುತ್ತಿತ್ತು
ಹೂವನ್ನು ನೋಡಿ ನಕ್ಷತ್ರಗಳು ಕಣ್ಣು ಹೊಡೆದಿತ್ತು
ಹೂವಿಗೆ ಸುಸ್ತಾಗಿ ಜೀವನಾ ಬೇಸರ ತಂದಿತ್ತು
ಕತ್ತಲೆಯಲ್ಲಿ ಅಳುತ್ತಾ ಹೂವು ತನ್ನವರನ್ನು ಕರೆದಿತ್ತು
ಯಾರು ಇಲ್ಲದೆ ಒಂಟಿ ಯಾತನೆ ಹೂವಿಗೆ ಕಾಡಿತ್ತು
ಬೆಳಕನು ತಂದ ಚಂದ್ರ ಹೂವ ನೋಡಿ ನಕ್ಕೀತ್ತು
ಸೊರಗಿ ಹೂವು ಏಕೋ ಬಾಡಿ ಕಣ್ಮರೆ ಆಗಿತ್ತು
*********ರಚನೆ********
ಡಾ ಚಂದ್ರಶೇಖರ್ ಸುನ್ನಾಪುರ ಹಾಲಪ್ಪ
.jpeg)
Comments
Post a Comment