ಯಾರಿಗೆ ಯಾರು ಇಲ್ಲ

 


ನೋವಿನ ಮಂದಿರದೀ ಸಂತಸದ 

ಬೆಳಕು ಮೂಡಲೆ ಇಲ್ಲ 

ಕತ್ತಲ ಕೋಣೆಯಲ್ಲಿ ಹಣತೆಯ ಕಿಡಿ 

ಕೋಣೆಯ ಹೊತ್ತಿ ಉರಿಸಿತ್ತಲ್ಲ 


ಅಜ್ಞಾನದ ಶಾಲೆಯಲ್ಲಿ ಜ್ಞಾನದ

 ಚಿಲುಮೆ ಹುಟ್ಟಲೆ ಇಲ್ಲ 

ಹಾಳು ಕೆರೆಯಲ್ಲಿ ಮಳೆ ನೀರು 

ಸುಮ್ಮನೆ ನಿಲ್ಲಲೇ ಇಲ್ಲ 


ವಿಧಿಯ ಆಟದಲ್ಲಿ ಮನೆಯು

 ಸ್ಮಶಾನವಾಯಿತು ಯಾಕೆ 

ಸಮುದ್ರದ ಅಲೆಯು ಸುನಾಮಿಯಾಗಿ

 ದಡವ ತಾಗಿತು ಏಕೆ 


ಒತ್ತಿದ ಬಾಳಿನಲ್ಲಿ ಪ್ರೇಮವು

ಚಿಗುರಿ ಹೂವು ಬಿಡಲೇ ಇಲ್ಲ 

ಸತ್ತ ಸಮಾಧಿಯಲ್ಲಿ ಅನ್ನದ ಕೂಳು 

ಕಾಗೆಯು ತಿನ್ನಲೇ ಇಲ್ಲ 


ಸ್ಮಶಾನದ ಬದುಕ ಗುಡಿಯಲ್ಲಿ 

ಪೂಜಿಸಲು ದೇವರೆ ಇಲ್ಲ 

ಮೂರು ದಿನದ ಈ ಬದುಕಿನಲ್ಲಿ 

ಯಾರಿಗೆ ಯಾರು ಇಲ್ಲ 


***********ರಚನೆ************ 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ