ಬದುಕು ಸುಡುತೈತೋ
ಮನದ ಒಳಗಿನ ಕಿಚ್ಚು ದೇಹ ಸುಡುತೈತೋ
ಬಿರಿದ ವಯಸ್ಸಿನ ಕಾವಿಗೆ ರಕ್ತ ಕುದಿತೈತೋ
ದ್ವೇಷ ಸುಡುವ ಕುದಿಗೆ ಮನಸ್ಸು ಬೆಂದೈತೋ
ಮಾತಿನ ಹಸಿ ವಿಷಕ್ಕೆ ಸಮಾಜ ಕುಣಿದೈತೋ
ನೋವಲಿ ಬೆಂದ ಬದುಕು ತಣ್ಣಗೆ ಆಗೈತೋ
ಶಾಂತಿ ಶಾಂತಿ ಎಂದು ನೆತ್ತರು ಬೇಡೈತೋ
ಕ್ರಾಂತಿಯ ಕಿಡಿಯ ಮನುಜ ಬೆಂಕಿ ಹತ್ತೈತೋ
ಸುಡುವ ಬೆಂಕಿಗೆ ಧರ್ಮ ತುಪ್ಪ ಸುರಿದೈತೋ
ಭಾಷೆ ಭಾಷೆಗೆ ವೇಷ ಭೇದ ಮಾಡೈತೋ
ಜಾತಿ ಜಾತಿ ತಾರತಮ್ಯ ರೋಷದ ಕಿಡಿ ಹಚ್ಚೈತೋ
ಕಪ್ಪು ಬಿಳಿ ಬಣ್ಣ ಏಕೋ, ಸುಕ್ಕು ಆಗೈತೋ
ಬೇಧ ಭಾವ ಮಾಡದೆ ರಕ್ತ ಹರಿದೈತೋ
ಹಸಿರು ಚಿಗುರದೆ ಬದುಕಲಿ ಹಸಿವು ನಲಿದೈತೋ
ತಿನ್ನಲು ಅನ್ನವು ಇಲ್ಲದೆ ದೇಹ ಬಿರಿದೈತೋ
ಪಾಪದ ಕರ್ಮ ಸುಡುತ ಪುಣ್ಯ ಎಲ್ಲೈತೋ
ಮೋಹದ ಅಲೆಯ ಬಾಳು ಮಸಣ ಸೇರೈತೋ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment