ಅಯ್ಯೋ ಮನುಜ*
ಎದೆಗೆ ಬಿದ್ದ ನೋವಿನ ಏಟಿಗೆ
ಮನವು ಏಕೋ ಕಲ್ಲಾಯ್ತು
ಬದುಕಲಿ ತಾಗಿದ ದ್ವೇಷಕ್ಕೆ
ಜೀವನ ಹಾಗೇ ಹುಣ್ಣಾಯಿತು
ಯಾರದೋ ಸೇಡಿಗೆ ಕಾಣದೆ
ಬದುಕು ಬಲಿಯಾಯ್ತು
ಯಾರದೋ ಹೂವು ಯಾರದೋ
ಮುಡಿಯಲಿ ಅರಳಾಯ್ತು
ನಕ್ಕರೆ ಸ್ವರ್ಗ ಅತ್ತರೆ ನರಕ
ಜೀವನ ಏಕೋ ಅರಿಯಾದಾಯ್ತು
ಎಷ್ಟೇ ಹಣವ ದುಡಿದರು
ಬೇರೆಯವರಿಗೆ ಗಂಟಾಯ್ತು
ಯಾರದೋ ಶ್ರಮ ಯಾರದೋ
ಪಾಲಿಗೆ ವರವಾಯ್ತು
ಹಸಿದ ಹೊಟ್ಟೆಗೆ ಬಿಸಿಯಾ ಊಟ
ಕುಂತಲ್ಲೇ ಏಕೋ ಮಣ್ಣಾಯ್ತು
ಎಲ್ಲವ ಬಿಟ್ಟು ಹೊರಡುವ
ಮನುಜಗೇ ಜೀವ ಆಸೆಯಾಯ್ತು
ತಿಂದಿದ್ದು ನಿನಗೆ ಗಳಿಸಿದ್ದು ಪರರಿಗೆ
ಗಾದೆ ನಿಜವಾಯ್ತು
ಹುಟ್ಟಿದಾಗ ಬೆತ್ತಲೆ ಸತ್ತಾಗ ಕತ್ತಲೆ
ಬೆಳಕು ಯಾರ ಪಾಲಾಯ್ತು
ಏನೇ ಮಾಡು ಎಷ್ಟೇ ಗಳಿಸು
ಆರು ಮೂರಡಿ ಗುಂಡಿ ಕೊನೆಯಾಯ್ತು
*********ರಚನೆ********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment