ಓ ಗೋವಿಂದ
ಮೂರು ದಿನದ ಬಾಳು
ಹೇಳುತ್ತಿದೆ ಕಣ್ಣೀರಿನ ಗೋಳು
ಬದುಕ ದಾರಿಯು ಬರಡು
ಆ ಬ್ರಹ್ಮನು ಏಕೋ ಕುರುಡು
ನಡೆಸೋ ದಾರಿ ತೋರಿ ನೀ ನಮ್ಮ ಗೋವಿಂದ //ಪಲ್ಲವಿ//
ಬಾಳು ನೋವಿನ ಸಂತೆ
ಬದುಕು ತುಂಬಾ ಚಿಂತೆ/
ದಾರಿ ಕಾಣದೆ ಕೂತೆ
ನಿನ್ನ ಜಪವ ಅರಿತೆ //
ಕಾಯ್ದು ಕಾಪಾಡು ನೀ ನಮ್ಮ ಗೋವಿಂದ
ವಿಧಿಯ ನೋಡದೆ ಬರೆದ ಬ್ರಹ್ಮ
ಸುಟ್ಟನು ಚಿಂತೆಯಲ್ಲಿ ನಮ್ಮ/
ಜೀವನದಿ ಹಸಿರು ಚಿಗುರಲೆ ಇಲ್ಲ
ಬಿಸಿ ನೀರಲ್ಲಿ ಬೇಳೆ ಬೇಯಲೇ ಇಲ್ಲ//
ಸಾಗಿಸು ಬಾಳ ಬಂಡಿ ನೀ ನಮ್ಮ ಗೋವಿಂದ
ಅನ್ನವ ತಿನ್ನುತ್ತ ಮನುಜ
ಮೋಸ ಮಾಡುತ ಸಹಜ/
ಆಡಿಹನು ಬದುಕಲ್ಲಿ ಆಟ
ಸಂಸಾರ ಗೋಳಿನ ಊಟ//
ದಾರಿ ಸೇರಿಸು ನೀ ನಮ್ಮ ಗೋವಿಂದ
ಬದುಕಿನ ಪಯಣ ಕಷ್ಟ
ಸಂತಸ ಪಡಲು ಇಷ್ಟ /
ಊರು ತುಂಬಾ ಜಾತ್ರೆ
ಹೊರಟರು ನಿನ್ನ ಯಾತ್ರೆ//
ಹೇಳು ಎದ್ದೇಳು ನೀ ನಮ್ಮ ಗೋವಿಂದ
***********ರಚನೆ***********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment