ಧ್ಯಾನದಿಂದ ಮನಸ್ಸಿಗೆ ಶಕ್ತಿ
ಜೀವನದ ಸಂತೋಷ ಮನುಷ್ಯನ ನಿರಂತರ ಪ್ರಯತ್ನವಾಗಿದೆ, ಮನುಷ್ಯ ಜೀವಿಯು ಯಾವಾಗಲೂ ದುಃಖವನ್ನು ಮರೆತು ಸಂತೋಷವಾಗಿರಲು ಪ್ರಯತ್ನಿಸುತ್ತಾನೆ. ಮನುಷ್ಯ ಒಬ್ಬ ಆಶಾ ಜೀವಿ, ಅವನು ಪಡುವ ಆಸೆಗಳು ಅವನನ್ನು ದುಃಖಕ್ಕೆ ದೂಡಿ ನಿರಾಶನನ್ನಾಗಿ ಮಾಡಿ, ಮನಸ್ಸು ಪ್ರತಿಯೊಬ್ಬ ವ್ಯಕ್ತಿಯನ್ನು ಚಕ್ರವರ್ತಿಯಂತೆ ಆಳಲು ಶುರುಮಾಡುತ್ತದೆ. ಇಂತಹ ಮನಸ್ಸಿನ ಮೇಲೆ ನಾವು ಹಿಡಿತ ಸಾಧಿಸಲು ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಮನಸ್ಸು ಒಂದು ರಹಸ್ಯ ಶಕ್ತಿ, ಅದು ನಮ್ಮನ್ನು ದೇವರಿಂದ ಬೇರ್ಪಡಿಸಿರುತ್ತದೆ, ಮನಸ್ಸು ಒಂದು ಆತ್ಮಶಕ್ತಿ, ಮನಸ್ಸಿನಿಂದ ನಾವು ಬ್ರಹ್ಮನು ಸ್ವರೂಪವನ್ನು ಕಾಣಬಹುದು. ಹೃದಯವೇ ಮನಸ್ಸಿನ ಆಸನವಾಗಿದೆ. ಕುಣಿಯುವ ಕುದುರೆಗೆ ಲಗಾಮು ಹಾಕು ತಿವಿಯುವ ಏತ್ತಿಗೆ ಮೂಗುದಾರ ಹಾಕು ಹೊಲವ ಮೇಯುವ ಆನೆಗೆ ಬೇಲಿ ಹಾಕು ಹುಚ್ಚು ಮನಸನು ಹಿಡಿದಿಡು ಸಾಕು ನಮ್ಮ ಮನಸ್ಸು ಬೇರೊಬ್ಬ ವ್ಯಕ್ತಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತದೆ, ಸ್ನೇಹಿತರು , ಸಂಬಂಧಿಕರು, ಇಷ್ಟಪಟ್ಟ ವಸ್ತುಗಳು ಹಾಗೂ ಇತರ ಮನಸ್ಸುಗಳೊಂದಿಗೆ. ನಾನು ಎಂಬ ಅಹಂಕಾರ ಮನಸ್ಸಿನ ಮರದ ಬೀಜವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಪ್ರಪಂಚ, ಲೋಕ, ಆಲೋಚನೆ, ಜ್ಞಾನ, ಮನೋಧರ್ಮ , ಅಭಿರುಚಿ, ಮನಸ್ಥಿತಿ, ದೈಹಿಕ ಗುಣಗಳು ಇರುತ್ತವೆ ಇವು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುತ್ತವೆ. ಮನಸ್ಸಿನ ಸೆಳೆತ ಎಂದರೆ ಅತಿಂದ್ರೀಯ ಸೆಳವು ಮನಸ್ಸು ಒಂದು ಅಭ್ಯಾಸಗಳ ...