ಚುಟುಕು ಕವನ-3
ಬ್ಯಾಂಕಲ್ಲಿ ಸಾಲದ ಮೇಳ
ಯಾರು ಕೇಳಬೇಕು ರೈತನ ಗೊಳ
ಮಾಡದೆ ನಾನು ಹಣದ ಸಾಲ
ಬೇಳದೈತೆ ಈಗ ಸಾಲದ ಬಾಲ
ದುಡ್ಡಿದ್ರೆ ಇಂದು ಬಾಳು ಕೈಲಾಸ
ದುಡ್ಡಿಗಾಗಿ ಮಾಡು ಇಲ್ಲಿ ವನವಾಸ
ಸಿಕ್ಕರೆ ದುಡ್ಡು ನೊಡದಂಗೆ ಪರದೇಶ
ಇಲ್ಲದಿದ್ರೆ ಗ್ಯಾರಂಟಿ ಉಪವಾಸ
ಮಳೆ ಇಲ್ಲಾಂದ್ರೆ ಭೂಮಿ ಬರಡು
ಹಣ ಇಲ್ಲಾಂದ್ರೆ ಬದುಕು ಕುರುಡು
ದುಡ್ಡಿದ್ರೆ ಎಲ್ಲರೂ ನೆಂಟರು
ಇಲ್ಲಾಂದ್ರೆ ಸುಮ್ನೆ ಹೋಂಟರು
*******ರಚನೆ********
ಡಾ.ಚಂದ್ರಶೇಖರ್ ಸಿ ಏಚ್
Comments
Post a Comment