ಯಾರು ಹೊಣೆ
ಬರೆಯುವ ಹಾಳೆಗೆ ಬೆಂಕಿ ಬಿದ್ದರೆ
ಲೇಖನಿಗೆ ಶಾಹಿಯ ಸಾವು ಬಂದರೆ
ಬಂಜರು ಭೂಮಿಲಿ ಪಾಪಸ್ ಗಿಡವು ನಕ್ಕರೆ
ಸುಡುವ ಮರಳು ಬೆಂಕಿಯಂತೆ ಸುಟ್ಟರೆ
ಯಾರು ಹೊಣೆ ವಿದಿ ಬರಹಕೆ ಇಲ್ಲಿ
ನಗುವ ಗಿಡಕೆ ಎಲೆ ರೋಗ ಬಂದರೆ
ಹಣ್ಣಿನ ತುಂಬಾ ಹುಳುಗಳು ತುಂಬಿರೆ
ಸಿಡಿಲಿನ ಹೊಡೆತಕ್ಕೆ ಸುಳಿಯೇ ಸುಟ್ಟರೆ
ನಗುವ ಹೂವು ಬಾಡಿ ನಿಂತರೆ
ಯಾರು ಹೊಣೆ ವಿದಿ ಬರಹಕೆ ಇಲ್ಲಿ
ಹಾರುವ ಹಕ್ಕಿಯ ರೆಕ್ಕೆಯೆ ಮುರಿದರೆ
ಈಜುವ ಮೀನನು ಕೊಕ್ಕರೆ ಕುಕ್ಕಿದರೆ
ಗುಬ್ಬಿಯ ಗೂಡಿನ ಮೊಟ್ಟೆ ಬಿದ್ದರೆ
ಕಾಗೆಗೆ ಕರೆಂಟ್ ತಂತಿಯೆ ಸಾವದರೆ
ಯಾರು ಹೊಣೆ ವಿದಿ ಬರಹಕೆ ಇಲ್ಲಿ
ದುಡಿವ ಕೈಗೆ ಪಲವೆ ದೊರಕದಿರೆ
ಬೇಳೆದ ಬೆಳೆಗೆ ನೇತ್ತರಿನಂತೆ ನೀರು ಹರಿದರೆ
ಕಾಣುವ ಕಣ್ಣು ಮೊಸವ ಮರೆತರೆ
ಮನಸ್ಸು ಚಿಂತೆಯ ಮಸಣದಿ ಬೇಂದರೆ
ಯಾರು ಹೊಣೆ ವಿದಿ ಬರಹಕೆ ಇಲ್ಲಿ
ಮೋಹಕ ನೋಟ ಕಾಟ ಕೊಟ್ಟರೆ
ಕಾಣದ ಬಯಕೆ ಬುಸ್ಸು ಗುಟ್ಟಿರೆ
ಯೌವ್ವನ ಏಕೋ ಹುಕ್ಕಿ ಹರಿದರೆ
ತಡೆಯುವರಾರು ನವಿಲಿನ ನರ್ತನ
ಯಾರು ಹೊಣೆ ವಿದಿ ಬರಹಕೆ ಇಲ್ಲಿ
*********ರಚನೆ*********
ಡಾ.ಚಂದ್ರಶೇಖರ್ ಸಿ ಏಚ್
Comments
Post a Comment